ಬೆಳ್ಳಾರೆಗೆ ಹಲವು ಬಾರಿ ೧೦೮ ಅಂಬ್ಯುಲೆನ್ಸ್ ವಾಹನ ಬರುವುದು ಹೋಗುವುದು ಜನ ಹೋರಾಟ ಮಾಡುವುದು ಮಾಮೂಲಿಯಾಗಿದೆ. ಇದೀಗ ಒಂದು ವಾರದಿಂದ ನಾಪತ್ತೆಯಾಗಿರುವ ೧೦೮ ಅಂಬ್ಯುಲೆನ್ಸ್ ಪುತ್ತೂರಿಗೆ, ಸಿಬ್ಬಂದಿ ಸುಳ್ಯಕ್ಕೆ ಶಿಪ್ಟ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳ್ಳಾರೆ ಪೇಟೆಯಲ್ಲಿ ಬೈಕ್ ಸವಾರನೋರ್ವ ದನ ಅಡ್ಡಬಂದು ಬಿದ್ದು ಕಾಲಿನ ಮೂಳೆ ಮುರಿತಕ್ಕೊಳಗಾಗಿದೆ. ಗಾಯಳುವನ್ನು ಆಸ್ಪತ್ರೆಗೆ ಸಾಗಿಸಲು ಇಲ್ಲಿ 108 ಅಂಬ್ಯುಲೆನ್ಸ್ ವಾಹನ ಸಿಗದೆ ಪರದಾಡಬೇಕಾಗಿ ಬಂತು. ಕೊನೆಗೆ ಒಂದು ಗಂಟೆ ಕಳೆದು ಖಾಸಗಿ ಅಂಬ್ಯುಲೆನ್ಸ್ ಸಿಕ್ಕಿದ ಮೇಲೆ ಗಾಯಳುವನ್ನು ಮಂಗಳೂರಿಗೆ ಕರೆದೊಯ್ಯಲಾಯಿತೆಂದು ತಿಳಿದುಬಂದಿದೆ. ಬೆಳ್ಳಾರೆ ಸರಕಾರಿ ಆಸ್ಪತ್ರೆಯಲ್ಲಿ ವೈಧ್ಯರು ಇಲ್ಲದೇ ರೋಗಿಗಳು ಪರದಾಡುವಂತಾಗಿದೆ. ಇನ್ನೂ ಹೇಗೂ ಮಳೆಗಾಲ, ವಿವಿಧ ಸಾಂಕ್ರಾಮಿಕ ರೋಗಗಳು ಪ್ರಾರಂಭವಾಗುವ ಸಮಯ ಇನ್ನಾದರೂ ಆರೋಗ್ಯ ಇಲಾಖೆ ,ಜನಪ್ರತಿನಿಧಿಗಳು ಕೂಡಲೇ ಗಮನಹರಿಸಿ ಜನರ ಆರೋಗ್ಯ ದಲ್ಲಿ ಚೆಲ್ಲಾಟವಾಡದೇ ಜನರಿಗೆ ಸರಿಯಾದ ಚಿಕಿತ್ಸೆ ಸಿಗುವಂತೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.
- Friday
- November 22nd, 2024