ಐವರ್ನಾಡಿನಲ್ಲಿರುವ ಎಸ್.ಬಿ.ಐ. ಬ್ಯಾಂಕ್ ನ ಎಟಿಎಂ ಜನರಿಗೆ ನಿರಂತರ ಸೇವೆ ನೀಡುವುದಂತೂ ಗ್ಯಾರಂಟಿ ಇಲ್ಲ. ಎಟಿಎಂ ಇದೆ ಎಂದು ನಂಬಿ ಹಣ ಬಿಟ್ಟು ಬಂದರೇ ಪರದಾಡಬೇಕಷ್ಟೇ ಎಂದು ಊರಿನ ಜನರಿಗೆ ಅರ್ಥವಾಗಿದೆ. ಆದರೇ ಸಿಬ್ಬಂದಿಯೊರ್ವರು ಮಾತ್ರ ದಿನಾ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಮಾಡಲು ನಿರಂತರ ದುರ್ಬಳಕೆಯಾಗುತ್ತಿದೆ. ಬೇಕಾದಷ್ಟೂ ಸಂಬಳ ಪಡೆದರೂ ಚಿಲ್ಲರೆ ಕಾಸಿಗೆ ಆಸೆ ಪಡುವವರೂ ತುಂಬಾ ಜನ ಇರ್ತಾರೆ. ಲಂಚ ಪಡೆಯುವವರೂ ಕೂಡ ಬೇಕಾದಷ್ಟೂ ಸಂಬಳ ಪಡೆಯುವವರೇ ಆಗಿರ್ತರೆ ಎಂಬುದು ಗಮನಾರ್ಹ.
ಐವರ್ನಾಡಿನ ಎಸ್ ಬಿಐ ಬ್ಯಾಂಕ್ ನ ಎಟಿಎಂ ನಲ್ಲಿ ಬ್ಯಾಂಕ್ ನ ಕ್ಯಾಷಿಯರ್ ಆಗಿರುವ ಜಯರಾಮ ಎಂಬವರು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದಿನಂಪ್ರತಿ ಚಾರ್ಜ್ ಮಾಡಲು ಎಟಿಎಂ ನಲ್ಲಿರುವ ಪ್ಲಗ್ ಪಾಯಿಂಟ್ ಅನ್ನೇ ಚಾರ್ಜಿಂಗ್ ಪಾಯಿಂಟ್ ಆಗಿ ಬಳಕೆ ಮಾಡ್ತಿದ್ದಾರೆ. ಇದರಿಂದ ಬ್ಯಾಂಕ್ ಗೆ ನಷ್ಟ ಉಂಟಾಗ್ತಿರೋದಂತೂ ಸತ್ಯ.
ಇವರು ಬ್ಯಾಂಕ್ ನ ಒಳಗೂ ಗ್ರಾಹಕರ ಜೊತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂಬ ದೂರುಗಳು ಕೂಡ ಇವೆ. ಇನ್ನಾದರೂ ಸಾರ್ವಜನಿಕರಿಗೆ ಎಟಿಎಂ ಹಗಲು ಹಾಗೂ ರಾತ್ರಿ ಉತ್ತಮ ಸೇವೆ ನೀಡುವಂತಾಗಲೂ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಲಿ ಎಂಬುದೇ ನಮ್ಮ ಕಾಳಜಿ.