Ad Widget

ಗ್ರಾ.ಪಂ.ಸದಸ್ಯೆ ನಾಪತ್ತೆ ಪ್ರಕರಣಕ್ಕೆ ರೋಚಕ ತಿರುವು – ವಿಡಿಯೋ ಸಹಿತ ಹೇಳಿಕೆ ನೀಡಿದ ಭಾರತಿ

. . . . . . . . .

ಸುಬ್ರಹ್ಮಣ್ಯ ಗ್ರಾ.ಪಂ.ಸದಸ್ಯೆ ಭಾರತಿ ನಾಪತ್ತೆ ಪ್ರಕರಣ ಭಾರಿ ಕುತೂಹಲ ಮತ್ತು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಭಾರತಿ ಮೂಕಮಲೆ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ.

. . . . . . .

ಅ. 29ರಂದು ಐನೆಕಿದು ಗ್ರಾಮದ ಮೂಕಮಲೆ ಮನೆ ನಿವಾಸಿ ಶಶಿಕಾಂತ್ ಎಂಬವರ ಪತ್ನಿ ಭಾರತಿ ಮೂಕಮಲೆ ನಾಪತ್ತೆಯಾಗಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದೀಗ ಭಾರತಿ ಅವರೆ ನೇರವಾಗಿ ವಿಡಿಯೋ ಮಾಡಿ ಹೇಳಿಕೆ ನೀಡಿರುವ ವೀಡಿಯೋ ವೈರಲ್ ಆಗಿದ್ದು ‘”ನಾನು ನಾನಾಗಿಯೇ ಬಂದಿದ್ದೇನೆ. ನನ್ನನ್ನು ಯಾರೂ ಅಪಹರಿಸಿಲ್ಲ. ನಾನು ಅವರನ್ನು ಮನೆಯ ಹತ್ತಿರ ಬರಲು ಹೇಳಿದ್ದೆ. ಅವರು ಬಂದು ನನ್ನನ್ನು ಕರೆದುಕೊಂಡು ಹೋದರು. 5 ವರ್ಷದಿಂದ ನಾನು ಲವ್ ಮಾಡ್ತಾ ಇದ್ದೆ. ಈಗಲೂ ಮಾಡ್ತಾ ಇದ್ದೇನೆ. ಮದುವೆಗೆ ಮುಂಚೆನೂ ಲವ್ ಮಾಡ್ತಿದ್ದೆ. ಇದರಿಂದಾಗಿ ಯಾರಿಗೂ ತೊಂದರೆ ಕೊಡಬೇಡಿ. ಯಾರತ್ರಾ ಕೇಳುವುದೂ ಬೇಡ. ನಮಗೆ ತೊಂದರೆ ಕೊಡಬೇಡಿ. ಹಾಗೇನಾದ್ರೂ ಮಾಡಿದ್ರೆ ನಾವಿಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ನಾನು ಖುಷಿಯಾಗಿಯೇ ಇದ್ದೇನೆ. ಆಮೇಲೆ ಏನಾದ್ರೂ ಆದರೆ ನೀವೇ ಜವಾಬ್ದಾರರು ಎಂದು ಅವರು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading