ಕೊಲ್ಲಮೊಗ್ರು ಗ್ರಾಮದ ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ದೇವಸ್ಥಾನದ ಪ್ರವೇಶ ದ್ವಾರದ ಮುಂಭಾಗದಲ್ಲಿರುವ ಜಾಗವನ್ನು ಶ್ರೀಮತಿ ವಸಂತಿ.ಎಸ್ ಇವರು ಬಜಾರ್ ದಾರಣೆ 7 ಲಕ್ಷ ರೂಪಾಯಿ ಮಾರಾಟ ದರವನ್ನು ನಿಗದಿಪಡಿಸಿ ಶ್ರೀ ಕ್ಷೇತ್ರಕ್ಕೆ ಮಾರಾಟ ಮಾಡುವುದೆಂದು ತೀರ್ಮಾನಿಸಿದ್ದರು. ಇದಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಒಪ್ಪಿ ಎಲ್ಲಾ ಭಕ್ತಾದಿಗಳ ಸಹಕಾರದಿಂದ ಖರೀದಿಸುವುದೆಂದು ನಿಶ್ಚಯಿಸಿದ್ದು, ಈ ಸಂಧರ್ಭದಲ್ಲಿ ಕೊಲ್ಲಮೊಗ್ರು ಗ್ರಾಮದ ಕಟ್ಟದ ಕೆ.ಗೋಪಾಲಕೃಷ್ಣ ಭಟ್ ಹಾಗೂ ಕೆ.ಜಿ.ಸರಸ್ವತಿ ದಂಪತಿಗಳ ಪುತ್ರ ಪ್ರಸ್ತುತ ಮಂಗಳೂರಿನಲ್ಲಿ ನ್ಯಾಯವಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಪ್ರಸಾದ್ ಕಟ್ಟ ಇವರು ವಸಂತಿ ಅವರಿಂದ ಜಾಗವನ್ನು ಖರೀದಿಸಿ ತಮ್ಮ ತಂಗಿ ದಿವಂಗತ ಕು.ಸಾವಿತ್ರಿ ಅವರ ಸ್ಮರಣಾರ್ಥವಾಗಿ ಶ್ರೀ ದೇವರಿಗೆ ಸೇವಾರೂಪದಲ್ಲಿ 0.71 ಎಕರೆ ಜಾಗವನ್ನು ನೀಡಿದರು. ನ.20 ರಂದು ಶಿವಪ್ರಸಾದ್ ಕಟ್ಟ ಇವರು ತನ್ನ ತಂದೆ ತಾಯಿ ಹಾಗೂ ಮನೆಯವರೊಂದಿಗೆ ಕ್ಷೇತ್ರಕ್ಕೆ ಬಂದು ಜಾಗದ ದಾಖಲೆ ಪತ್ರಗಳನ್ನು ಶ್ರೀ ದೇವರಿಗೆ ಸಮರ್ಪಿಸಿ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು.
- Thursday
- November 21st, 2024