ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಹಾಗೂ ಗ್ರಾಮ ಪಂಚಾಯತ್ ಗುತ್ತಿಗಾರು ಇವುಗಳ ಸಂಯುಕ್ತಾಶ್ರಯದಲ್ಲಿ ನ.19 ರಂದು ಗ್ರಾಮ ಪಂಚಾಯತ್ ಗಿರಿಜನ ಸಭಾಭವನ ಗುತ್ತಿಗಾರು ಇಲ್ಲಿ ವಿಶೇಷ ಮಹಿಳಾ ಗ್ರಾಮ ಸಭೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇವತಿ ಆಚಳ್ಳಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ನಾಡಗೀತೆ, ಸ್ಕಿಟ್, ಹಗ್ಗಜಗ್ಗಾಟ, ಲಕ್ಕಿ ಗೇಮ್ ಆಟಗಳನ್ನು ಆಡಿಸಲಾಯಿತು. ನಂತರ ನಡೆದ ಸಮಾರೋಪ ಸಭೆಯಲ್ಲಿ ಲಿಂಗಸಮಾನತೆಯ ಬಗ್ಗೆ ಮಾಹಿತಿ, ನರೇಗಾ, ಆರೋಗ್ಯ ಅಭಿಯಾನದ ಬಗ್ಗೆ ಮಾಹಿತಿ ನೀಡಲಾಯಿತು.
ಸ್ಪರ್ಧೆಯಲ್ಲಿ ವಿಜೇತರಾದ ಸದಸ್ಯೆಯರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಮುಖ್ಯ ಆಕರ್ಷಣೆ ಲಕ್ಕಿ ಸದಸ್ಯೆ ಹಾಗೂ ಲಕ್ಕಿ ತಂಡವನ್ನು ಅದೃಷ್ಟ ಚೀಟಿ ಆರಿಸಿ ಗುರುತಿಸಲಾಯಿತು.
ವೇದಿಕೆಯಲ್ಲಿ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೇವತಿ ಆಚಳ್ಳಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಭಾಸ್ಕರ ಎರ್ಧಡ್ಕ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ, ಅಮರ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗುತ್ತಿಗಾರು ಇದರ ಅಧ್ಯಕ್ಷರಾದ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ, ಟಿ.ಪಿ.ಎಂ ಶ್ವೇತಾ, ನೋಡೆಲ್ ಅಧಿಕಾರಿ ಉಷಾ, ಬಿ.ಆರ್.ಪಿ ನಂದಿನಿ, ಐ.ಇ.ಸಿ ಕೋ-ಆರ್ಡಿನೇಟರ್ ಆರೋಗ್ಯ ಅಧಿಕಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 200 ಮಂದಿ ಮಹಿಳಾ ಸದಸ್ಯೆಯರು ಭಾಗವಹಿಸಿದ್ದು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ ಅತಿಥಿಗಳನ್ನು ಸ್ವಾಗತಿಸಿದರು. ಚಿಗುರು ಸಂಜೀವಿನಿ ತಂಡದ ಸದಸ್ಯರು ಅತಿಥಿಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಐವರ್ನಾಡಿನ ಎಂ.ಬಿ.ಕೆ, ದೇವಚಳ್ಳದ ಎಂ.ಬಿ.ಕೆ, ನೆಲ್ಲೂರು ಕೆಮ್ರಾಜೆಯ ಎಂ.ಬಿ.ಕೆ ಉಪಸ್ಥಿತರಿದ್ದು ಸ್ಪರ್ಧಾ ಸದಸ್ಯರನ್ನು ಪ್ರೋತ್ಸಾಹಿಸಿದರು. ಎಂ.ಬಿ.ಕೆ ಮಿತ್ರಕುಮಾರಿ ಚಿಕ್ಮುಳಿ ಅವರ ವಂದನೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಎಲ್.ಸಿ.ಆರ್.ಪಿ ದಿವ್ಯ ಚತ್ರಪ್ಪಾಡಿ, ಶಾರದಾ ನಡುಗಲ್ಲು, ಪಶು ಸಖಿ, ಕೃಷಿ ಸಖಿ, ಉದ್ಯೋಗ ಸಖಿ, ಎಫ್.ಎಲ್.ಸಿ.ಆರ್.ಪಿ, ಬಿ.ಸಿ ಸಖಿ, ಪಂಚಾಯತ್ ಸದಸ್ಯರುಗಳು, ಪಂಚಾಯತ್ ಸಿಬ್ಬಂದಿಗಳು, ಗುತ್ತಿಗಾರು ಗ್ರಂಥಪಾಲಕಿ, ಅಂಗನವಾಡಿ ಕಾರ್ಯಕರ್ತೆಯರು, ಅಮರ ಸಂಜೀವಿನಿ ಒಕ್ಕೂಟದ ಸ್ತ್ರೀ ಶಕ್ತಿ, ನವೋದಯ ಸಂಘದ ಸದಸ್ಯರುಗಳು ಭಾಗವಹಿಸಿದ್ದರು. ಸುಬ್ರಹ್ಮಣ್ಯ ದೇವಸ್ಥಾನದಿಂದ ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.
- Sunday
- November 24th, 2024