ಪದ್ಮವಿಭೂಷಣ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರಾಜಪೇಟೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಶ್ರೀ ಮಂಜುನಾಥೇಶವರ ವ್ಯಸನ ಮುಕ್ತ ಮತ್ತು ಸಂಶೋಧನಾ ಕೇಂದ್ರ ಉಜಿರೆ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಕೊಡಗು ಸಂಪಾಜೆ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ, ಜ್ಞಾನ ವಿಕಾಸ ಕೇಂದ್ರಗಳು ಕೊಡಗು ಸಂಪಾಜೆ, ನವಜೀವನ ಸಮಿತಿ, ಶೌರ್ಯ ವಿಪತ್ತು ಘಟಕ ಕೊಡಗು ಸಂಪಾಜೆ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಗ್ರಾಮ ಪಂಚಾಯತ್ ಕೊಡಗು ಸಂಪಾಜೆ, ಮದೆನಾಡು, ಚೆಂಬು, ಪೆರಾಜೆ, ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಕೊಡಗು ಸಂಪಾಜೆ, ಮದೆನಾಡು, ಪೆರಾಜೆ, ಶ್ರೀ ಭಗವಾನ್ ಸಂಘ (ರಿ) ಉರುಬೈಲು ಚೆಂಬು ಇವರ ಸಹಯೋಗದೊಂದಿಗೆ 1618 ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭವೂ ನ. 19ರಂದು ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಎಂ.ಬಿ ಸದಾಶಿವ, ಆಡಳಿತ ಮೊಕ್ತೇಸರರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಂಪಾಜೆ ಇವರು ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅನಂತ ಎನ್.ಸಿ, ಅಧ್ಯಕ್ಷರು 1618 ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವರಾಂ ಬಿ.ಆರ್ ಗೌರವಾಧ್ಯಕ್ಷರು, 1618ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಕೊಡಗು, ಶ್ರೀಮತಿ ನಿರ್ಮಲ ಭರತ್, ಅಧ್ಯಕ್ಷರು, ಗ್ರಾಮ ಪಂಚಾಯತ್ ಸಂಪಾಜೆ, ಮಧುಸೂದನ್, ವಲಯ ಅರಣ್ಯಾಧಿಕಾರಿ ಕೊಡಗು ಸಂಪಾಜೆ, ಶ್ರೀನಿವಾಸ, ಎ. ಎಸ್.ಐ ವಲಯ ಪೊಲೀಸ್ ಠಾಣೆ, ಪಿ.ಡಿ. ವಿಶ್ವನಾಥ ಅಧ್ಯಕ್ಷರು, ಗಣಪತಿ ದೇವಸ್ಥಾನ ಕೊಯನಾಡು, ಯು. ಬಿ ಚಕ್ರಪಾಣಿ, ನವಮಿ ಸ್ಟೋರ್ ಕಲ್ಲುಗುಂಡಿ, ದಿನೇಶ್, ಯೋಜನಾಧಿಕಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ), ಶ್ರೀ ದೇವಿಪ್ರಸಾದ್, ಶಿಬಿರಾಧಿಕಾರಿ, ಧನಂಜಯ ಅಗೋಳಿಕಜೆ, ಜಿಲ್ಲಾ ಉಪಾಧ್ಯಕ್ಷರು, ಜನಜಾಗೃತಿ ಸಮಿತಿ ಇವರೆಲ್ಲರೂ ಉಪಸ್ಥಿತರಿದ್ದರು. ಶಿಬಿರದ ಉದ್ಘಾಟನೆಯ ನಂತರ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ ಮತ್ತು ನೋಂದಾವಣೆ ಕಾರ್ಯ ನಡೆಯಿತು. ನಂತರ ಕೌಟುಂಬಿಕ ಸಲಹೆ, ಗಣ್ಯರ ಮಾಹಿತಿ ಮಾರ್ಗದರ್ಶನ, ಸಾಂಸ್ಕ್ರತಿಕ ಕಾರ್ಯಕ್ರಮ, ಭಜನೆ ನಂತರ ಶಿಬಿರಾರ್ಥಿಗಳಿಗೆ ಚಟುವಟಿಕೆಗಳು ನಡೆಯಲಿದೆ.
- Thursday
- November 21st, 2024