ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾರತದ ಪ್ರಥಮ ಪ್ರಧಾನಿ ಸ್ವಾತಂತ್ತ್ರ್ಯ ಹೋರಾಟಗಾರ ದಿವಂಗತ ಜವಾಹರ್ ಲಾಲ್ ನೆಹರು 133 ನೇ ಜನ್ಮ ದಿನಾಚರಣೆ ಇಂದು ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿಸಿ ಜಯರಾಮ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಜಿ ಸದಸ್ಯ ಡಾಕ್ಟರ್ ಬಿ ರಘು ಪಂಡಿತ್ ನೆಹರುರವರ ನವ ಭಾರತ ನಿರ್ಮಾಣದ ಯೋಜನೆ, ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ, ಮುಂತಾದ ಕ್ರಾಂತಿಕಾರಿ ಯೋಜನೆಗಳಿಂದ ಭಾರತವನ್ನು ಸದೃಢವಾಗಿ ಅಭಿವೃದ್ಧಿಯತ್ತ ಮುನ್ನಡೆಸಿದ ರೀತಿಯನ್ನು ನೆನಪಿಸಿಕೊಂಡು, ಇಂದಿನ ಭಾರತಕ್ಕೆ ಅಡಿಗಲ್ಲು ಹಾಕಿದ ಪಂಡಿತ್ ನೆಹರುರವರು ನಮಗೆಲ್ಲ ಆದರ್ಶಪ್ರಾಯರು ಎಂದು ಈ ಸಂದರ್ಭದಲ್ಲಿ ಸ್ಮರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿಸಿ ಜಯರಾಮ್ ಮಾತನಾಡಿ ಪಂಡಿತ್ ನೆಹರುರವರು ದೂರಾಲೋಚನೆಯ ಆಡಳಿತ ಮತ್ತು ಅವರು ಕೈಗೊಂಡ ಯೋಜನೆಗಳು ಸೇರಿದಂತೆ ಸಹಕಾರಿ ಚಳುವಳಿ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಹಕಾರಿಯಾಯಿತು. ದೇಶದ ಜನತೆ ಅವರನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೆ.ಎಮ್ ಮುಸ್ತಫ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ ಜೆ,ಮಾಧ್ಯಮ ಸಂಯೋಜಕ ಭವಾನಿ ಶಂಕರ್ ಕಲ್ಮಡ್ಕ,ಮಾಧ್ಯಮ ವಕ್ತಾರ ನಂದರಾಜ್ ಸಂಕೇಶ್, ಇಂಟರ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ,ಚೇತನ್ ಕಜೆಗದ್ದೆ,ಮಂಜುನಾಥ ಮಡ್ತಿಲ, ಶಾಹಿದ್ ಫಾಾರೆ ಗಂಗಾಧರ ಮೇನಾಳ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
- Friday
- November 1st, 2024