Ad Widget

ಕುಕ್ಕೆ ಸುಬ್ರಹ್ಮಣ್ಯ ಲಕ್ಷದೀಪೋತ್ಸವದಲ್ಲಿ ವಿಶೇಷ ಕುಣಿತ ಭಜನೋತ್ಸವದ ಮೆರುಗು – ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ

. . . . . . .

ನಾಗಾರಾಧನೆಯ ಪ್ರಸಿದ್ಧ ಕ್ಷೇತ್ರವಾಗಿರುವ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ
ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸದ ಲಕ್ಷದೀಪೋತ್ಸವದ ದಿನ ಈ ಭಾರಿ ಕುಣಿತ ಭಜನೋತ್ಸವ ನೆರವೇರಲಿದೆ. ನ.23ರಂದು ನಡೆಯುವ ಉತ್ಸವ ಸಂದರ್ಭ ಕುಣಿತ ಭಜನೆಯು ವಿಶೇಷ ಮೆರುಗು ನೀಡಲಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಹೇಳಿದರು.
ಶ್ರೀ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ಆದಿತ್ಯವಾರ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿದರು. ಲಕ್ಷದೀಪೋತ್ಸವದ ದಿನ ಸಂಜೆ 7ಗಂಟೆಯಿಂದ ಶ್ರೀ ದೇವಳದ ರಾಜಗೋಪುರದ ಬಳಿಯಿಂದ ರಥಬೀದಿ, ಅಡ್ಡಬೀದಿ
ಕಾಶಿಕಟ್ಟೆಯಾಗಿ ಕುಮಾರಧಾರದ ವರೆಗೆ ಕುಣಿತ ಭಜನಾ ಸಂಭ್ರಮವನ್ನು ಶ್ರೀ ದೇವಳದ ಆಡಳಿತವು ವಿಶೇಷವಾಗಿ ಹಮ್ಮಿಕೊಂಡಿದೆ ಎಂದರು.
1000 ಭಜನಾ ತಂಡಗಳು:
ಈ ಭಜನಾ ಸಂಭ್ರಮದಲ್ಲಿ ಸುಮಾರು 1,000 ಭಜನಾ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ.
ಈ ಭಜನಾ ಸಂಭ್ರಮದಲ್ಲಿ ಪ್ರಮುಖವಾಗಿ ಖ್ಯಾತ ಗಾಯಕರಾದ ಜಗದೀಶ ಆಚಾರ್ಯ,
ಪುತ್ತೂರು ಇವರು ಭಾಗವಹಿಸಲಿದ್ದು, ಭಜನಾ ತಂಡಗಳ ಪ್ರಧಾನ ವೇದಿಕೆಯನ್ನು ಅಲಂಕರಿಸಲಿದ್ದಾರೆ.ಅಲ್ಲದೆ ಇವರ ಹಾಡಿಗೆ ಪ್ರತಿ ತಂಡಗಳು ಹೆಜ್ಜೆ ಹಾಕಲಿದೆ.ವಿದ್ಯಾರ್ಥಿಗಳು, ಊರವರು, ಭಕ್ತರು, ಸಂಘ ಸಂಸ್ಥೆಗಳು, ಭಕ್ತರು ಭಜನೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ನುಡಿದರು.
10 ಮಂದಿಯ ತಂಡ:
ರಥಬೀದಿ ಹಾಗೂ ಅಡ್ಡಬೀದಿ, ಕಾಶಿಕಟ್ಟೆವರೆಗಿನ ರಸ್ತೆಯ ಇಕ್ಕೆಲಗಳಲ್ಲಿ 10 ಮಂದಿ
ಸದಸ್ಯರನ್ನೊಳಗೊಂಡ ಭಜನಾ ತಂಡಗಳು ಸೇವೆ ನೆರವೇರಿಸಲಿದೆ‌. ತಂಡದಲ್ಲಿ 10 ಮಂದಿಗೆ ಮಾತ್ರ ಅವಕಾಶವಿದೆ.ತಂಡದಲ್ಲಿ 10ಕ್ಕಿಂತ ಅಧಿಕ ಮಂದಿ ಇದ್ದರೆ ಎರಡು ತಂಡಗಳನ್ನು ರಚಿಸಬೇಕಾಗುತ್ತದೆ. ತಂಡಗಳಿಗೆ ಪ್ರತ್ಯೇಕ ಸ್ಥಳವನ್ನು ನಿಯೋಜನೆ ಮಾಡಿ ನೀಡಲಾಗುವುದು.ತಮಗೆ ನಿಗದಿ ಮಾಡಿ ಸ್ಥಳಗಳಲ್ಲಿ ತಂಡಗಳು ಸೇವೆ ನೆರವೇರಿಸಬೇಕಾಗಿದೆ ಎಂದು ಹೇಳಿದರು.
1000 ತಂಡಗಳು ಭಾಗವಹಿಸುವ ನಿರೀಕ್ಷೆ:
ಶ್ರೀ ದೇವಳದ ಗೋಪುರದಿಂದ ಸವಾರಿ ಮಂಟಪ ತನಕ, ರಥಬೀದಿ ವೃತ್ತದಿಂದ ಕಾಶಿಕಟ್ಟೆ ತನಕ, ಕಾಶಿಕಟ್ಟೆಯಿಂದ ಕುಮಾರಧಾರ ತನಕ ಕುಣಿತ ಭಜನೆ ನಡೆಯಲಿದೆ.ಸುಮಾರು1000 ತಂಡಗಳು ಭಾಗವಹಿಸಿ ಸೇವೆ ನೆರವೇರಿಸುವ ನಿರೀಕ್ಷೆ ಇದೆ. ಸಂಘ ಸಂಸ್ಥೆಗಳು, ದೇವಾಲಯಗಳು, ವಿದ್ಯಾಸಂಸ್ಥೆ, ಭಕ್ತರು ಮತ್ತು ಊರವರು ಸೇವೆ ನೆರವೇರಿಸಬಹುದು. ಈ ಬಗ್ಗೆ ಈ ಬಗ್ಗೆ ಸಾರ್ವಜನಿಕರ ಸಭೆ ನಡೆಸಿ ಜವಬ್ದಾರಿ ಹಂಚಿಕೊಡಲಾಗುವುದು ಎಂದು ನುಡಿದರು.
ಸಾರ್ವಜನಿಕರಿಗೆ ಸೇವೆಗೆ ಅವಕಾಶ:
ಈ ಭಜನಾ ಸಂಭ್ರಮದಲ್ಲಿ ಸಾರ್ವಜನಿಕರು ಭಾಗವಹಿಸಲು ಅವಕಾಶ ನೀಡಲಾಗಿದೆ. ಭಾಗವಹಿಸಲು ಇಚ್ಚಿಸುವ
ತಂಡಗಳು ನ.20ದು ಅಪರಾಹ್ನ 2 ಗಂಟೆ ಒಳಗೆ ಶ್ರೀ ದೇವಳದ ಕಛೇರಿಯಲ್ಲಿ ಹೆಸರು ನೋಂದಾಯಿಸಬೇಕು.

ಕ್ಯೂಆರ್ ಕೋಡ್ ಮೂಲಕ ಅವಕಾಶ:
ಭಜನೋತ್ಸವಕ್ಕೆ ಹೆಸರು ನೋಂದಾಯಿಸಲು ಕ್ಯೂ ಆರ್ ಕೋಡ್ ಮೂಲಕ ಅವಕಾಶ ಕಲ್ಪಿಸಲಾಗಿದೆ.ರಾಜ್ಯಾದ್ಯಂತ ದ ಭಕ್ತರು ಕುಣಿತ ಭಜನಾ ಸೇವೆ ನೆರವೇರಿಸಲು ಅವಕಾಶ ಒದಗಿಸಲು ಈ ಯೋಜನೆ ಮಾಡಲಾಗಿದೆ.

ಭಾರತೀಯ ಉಡುಗೆ:
ನೋಂದಾಯಿಸಿಕೊಳ್ಳುವ ಪ್ರತೀ ತಂಡದಲ್ಲಿ ಕನಿಷ್ಠ 10 ಮಂದಿಗೆ ಮಾತ್ರಅವಕಾಶವಿದೆ. 10 ಮಂದಿಗಿಂತ ಅಧಿಕ ಮಂದಿ ಇದ್ದಲ್ಲಿ ಕ್ಕಿಂತ ಅಧಿಕ ತಂಡಗಳನ್ನು ರಚಿಸಿಕೊಂಡು ಭಜನಾ ಸಂಭ್ರಮದಲ್ಲಿ ಭಾಗವಹಿಸಬಹುದು. ಭಾಗವಹಿಸುವ ಭಜನಾ ತಂಡದ ಸದಸ್ಯರು ಭಾರತೀಯ ಉಡುಗೆಗಳನ್ನು ಧರಿಸಬೇಕು.

ಲಕ್ಷ ಹಣತೆ ಪ್ರಜ್ವಲನ: ಶ್ರೀ ದೇವರು ಉತ್ಸವಕ್ಕೆ ರಥಬೀದಿಗೆ ಪ್ರವೇಶಗೈಯುವ ವೇಳೆ ಶ್ರೀ ದೇವಳದ ಸಿಬ್ಬಂದಿಗಳು,
ವಿದ್ಯಾಸಂಸ್ಥೆಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ಮತ್ತು ಸಾರ್ವಜನಿಕ ಭಕ್ತರಿಂದ ಲಕ್ಷ
ಹಣೆತೆಯನ್ನು ಬೆಳಗಿಸುವ ಕಾರ್ಯಕ್ರಮವು ನೆರವೇರಲಿದೆ.ರಥಬೀದಿ, ಸವಾರಿ ಮಂಟಪ, ಪ್ರಧಾನ ರಸ್ತೆಯ ಇಕ್ಕೆಲ, ಆಂಜನೇಯ ದೇವಸ್ಥಾನ, ಕಾಶಿಕಟ್ಟೆ, ಬಿಲದ್ವಾರ , ಕುಮಾರಧಾರ ಮತ್ತು ಆದಿಸುಬ್ರಹ್ಮಣ್ಯ ಸೇರಿದಂತೆ ಕ್ಷೇತ್ರಾದ್ಯಂತ ದೀಪ ಪ್ರಜ್ವಲನಗೊಳ್ಳಲಿದೆ ಎಂದು ನುಡಿದರು. ಗೋಷ್ಠಿಯಲ್ಲಿ ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ವನಜಾ ವಿ ಭಟ್ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!