ಎಲ್ಲರಿಗೆ ಸರಕಾರಿ ಉದ್ಯೋಗ ಸಿಗುವುದು ಕಷ್ಟ, ಇಂತಹ ಸಂದರ್ಭಗಳಲ್ಲಿ ಯುವಕರು ವಂಚಿತರಾಗಬಾರದೆನ್ನುವ ಉದ್ದೇಶದಿಂದ ಇಂತಹ ಉದ್ಯೋಗ ಮೇಳಗಳನ್ನು ಆಯೋಜನೆ ಮಾಡಲಾಗಿದ್ದು ಮಹತ್ವ ಪಡೆಯಲಿದೆ ಎಂದು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಅವರು ಸುಳ್ಯದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನ.26 ರಂದು ಸುಳ್ಯದ ನೆಹರೂ ಸ್ಮಾರಕ ಮಹಾ ವಿದ್ಯಾಲಯದಲ್ಲಿ ನಡೆಯಲಿರುವ ಉದ್ಯೋಗ ಮೇಳದಲ್ಲಿ ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಂಸ್ಥೆ ನೇತೃತ್ವದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ನಡೆಯಲಿದ್ದು, 50 ಕ್ಕೂ ಹೆಚ್ಚು ವಿವಿಧ ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಸರಕಾರ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸಿದ್ದು ಇಲಾಖೆಯಿಂದ ಸ್ವ ಉದ್ಯೋಗದ ಬಗ್ಗೆ ಕೂಡ ಮಾಹಿತಿ ದೊರೆಯಲಿದೆ. 10 ತರಗತಿ ಮೇಲ್ಪಟ್ಟು ವಿಧ್ಯಾಭ್ಯಾಸ ಹೊಂದಿದ ಎಲ್ಲರೂ, ಡ್ರೈವಿಂಗ್ ತಿಳಿದವರು ಎಲ್ಲಾ ದಾಖಲೆಗಳೊಂದಿಗೆ ಭಾಗವಹಿಸಲು ಅವಕಾಶವಿದೆ ಎಂದರು.
ಕೆರಿಯರ್ ಡೆಸ್ಟಿನಿ ಕಂಪೆನಿಯ ಜಯಶ್ರೀ ಮಾತನಾಡಿ ಯಾವುದೇ ಕಂಪನಿಗಳು ಉದ್ಯೋಗ ಮೇಳವನ್ನು ನೋಂದಾಯಿಸಲು ಬಯಸಿದರೆ ವಸತಿ/ಸಾರಿಗೆ ಮತ್ತು ಆಹಾರ ನೀಡಲಾಗುವುದು. ಉದ್ಯೋಗ ಬಯಸಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಆದವರು, ಪದವಿ, ಸ್ನಾತಕೋತ್ತರ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ಪದವೀಧರರು ಭಾಗವಹಿಸಬಹುದು. ಉಚಿತವಾಗಿ ನೊಂದಾವಣೆ ಮಾಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 7338676611 ನಂಬರ್ ಗೆ ಕರೆ ಮಾಡಬಹುದು ಎಂದರು.