Ad Widget

ಬೊಳುಬೈಲಿನ ಪೀಸ್ ಸ್ಕೂಲ್ ನಲ್ಲಿ ‘ಲಸಿಕಾ ಶಿಬಿರ’ ಕಾರ್ಯಕ್ರಮ

. . . . . .

ಬೊಳುಬೈಲು, ನ.5: ಪೀಸ್ ಸ್ಕೂಲ್, ಬೊಳುಬೈಲು, ಸುಳ್ಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಳಾರೆ ಇದರ ಜಂಟಿ ಆಶ್ರಯದಲ್ಲಿ ‘ಲಸಿಕಾ ಶಿಬಿರ’ ಕಾರ್ಯಕ್ರಮವು ಪೀಸ್ ಸ್ಕೂಲ್ ವಠಾರದಲ್ಲಿ ಜರುಗಿತು. ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಳಾರೆ, ಇದರ ಆರೋಗ್ಯಾಧಿಕಾರಿಯಾದ ಡಾ.ಗಿರೀಶ್ ಮುಂದಿನ ತಿಂಗಳಿನಲ್ಲಿ ಒಂದರಿಂದ ಹದಿನೈದು ವಯಸ್ಸಿನ ಮಕ್ಕಳಿಗೆ ನೀಡಲಾಗುವ ಜೆಇ(ಜಪಾನೀಸ್ ಎನ್ಸಫಾಲಿಟಿಸ್) ಲಸಿಕೆಯು ಪಡೆಯುವ ಮಹತ್ವದ ಕುರಿತು ಪೋಷಕರಿಗೆ ವಿವರವಾಗ ತಿಳಿಪಡಿಸಿದರು. ಮುಖ್ಯ ಅತಿಥಿಯಾಗಿ ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಎಂ. ಬಾಬು ಆಗಮಿಸಿ ಸಭಿಕರನ್ನುದ್ದೇಶಿಸಿ ಮಾತನಾಡಿದರು. ತೌಹೀದ್ ಎಡುಕೇಶನ್ ಅಂಡ್ ಚಾರಿಟೇಬಲ್ ಫೌಂಡೇಶನ್, ಬೊಳುಬೈಲು, ಸುಳ್ಯ, ಇದರ ಅಧ್ಯಕ್ಷರಾದ ಕೆ. ಅಬೂಬಕರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಮುಜೀಬ್ ಪೈಚಾರ್ ಮತ್ತು ಗೀತಾ ಗೋಪಿನಾಥ್, ಕಾರುಣ್ಯ ಚಾರಿಟೇಬಲ್ ಟ್ರಸ್ಟ್, ಪೈಚಾರ್ ಇದರ ಅಧ್ಯಕ್ಷರಾದ ಡಾ. ಆರ್. ಬಿ. ಬಶೀರ್, ಅಬ್ದುಲ್ಲಾ ಸುಳ್ಯಾಕಾರ್ಸ್ ಟ್ರೇಡರ್ಸ್, ಬಿ. ಅಬ್ಲಾಸ್, ಫಾರೂಕ್ ಪೈ ಚಾರ್, ಅಬ್ದುಲ್ ಗಫೂರ್ ಬೊಳುಬೈಲು ಮೊದಲಾದವರು ಉಪಸ್ಥಿತರಿದ್ದರು. ಒಂದನೇ ಮತ್ತು ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಡಿಟಿಪಿ ಮತ್ತು ಟಿಟಿ ಲಸಿಕೆಯು ನೀಡಲಾಯಿತು.

ಪೀಸ್ ಸ್ಕೂಲ್ ಪ್ರಾಂಶುಪಾಲರಾದ ಮುಹಮ್ಮದ್ ಸೈಫುಲ್ಲಾ ಸ್ವಾಗತಿಸಿ ಅರೇಬಿಕ್ ಶಿಕ್ಷಕ ಹಸೈನಾರ ಸ್ವಲಾಹಿ ವಂದಿಸಿದರು. ಆರ್. ಬಿ. ಬಶೀರ್ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!