Ad Widget

ಪೆರಾಜೆ : ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಿರ್ಮಾಣಗೊಂಡ ವಾತ್ಸಲ್ಯ ಮನೆ ಹಸ್ತಾಂತರ ಮತ್ತು ಸಹಾಯಧನ ಮಂಜೂರಾತಿ ಪತ್ರ ವಿತರಣೆ

. . . . . . .

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ ) ಸುಳ್ಯ ತಾಲೂಕು ಸಂಪಾಜೆ ವಲಯದ ಪೆರಾಜೆ ಅಂಜಿಕಾರು ಎಂಬಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಅನುದಾನದಲ್ಲಿ ನಿರ್ಮಾಣಗೊಂಡ ವಾತ್ಸಲ್ಯ ಮನೆ ಮತ್ತು ಸಹಾಯಧನ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಉಡುಪಿಯ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್ ಭಾಗವಹಿಸಿ ಮನೆಯ ಕೀ ಹಸ್ತಾoತರ ಮಾಡಿದರು.ಇತ್ತೀಚೆಗೆ ಸಂಪಾಜೆಯಲ್ಲಿ ಉಂಟಾದ ಜಲ ಪ್ರವಾಹದಲ್ಲಿ ಬಹಳಷ್ಟು ಕುಟುಂಬಗಳಿಗೆ ಆರ್ಥಿಕವಾಗಿ ನಷ್ಟ ಉಂಟಾಗಿದ್ದು ಇದರಲ್ಲಿ ವಿಪರೀತ ಹಾನಿಯಾದ 15 ಕುಟುಂಬಗಳಿಗೆ ಸಹಾಯಧನ ಪರಿಹಾರ ಮೊತ್ತವನ್ನು ವಿತರಣೆ ಮಾಡಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. 2 ಸದಸ್ಯರಿಗೆ ಸಿಡ್ಬಿ ಸಾಲ ಯೋಜನೆಯಲ್ಲಿ ಆಟೋ ರಿಕ್ಷಾ ವಿತರಣೆ ಮಾಡಲಾಯಿತು. ಪ್ರಾಸ್ತವಿಕವಾಗಿ ಜ್ಞಾನವಿಕಾಸ ನಿರ್ದೇಶಕ ವಿಠ್ಠಲ್ ಪೂಜಾರಿ ಮಾತನಾಡಿದರು. ಬೆಳಗ್ಗೆ ಗಣಹೋಮ, ನಂತರ ಶ್ರೀ ಮೂಕಾಂಬಿಕಾ ಭಜನೆ ಮಂಡಳಿ ಅರಂಬೂರು ಇವರಿಂದ ಭಜನಾ ಸೇವೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ವಹಿಸಿದ್ದರು. ವೇದಿಕೆಯಲ್ಲಿ ದ. ಕ. ಜಿಲ್ಲಾ ನಿರ್ದೇಶಕರು ಪ್ರವೀಣ್ ಕುಮಾರ್,ಒಕ್ಕೂಟ ವಲಯಧ್ಯಕ್ಷ ಹೂವಯ್ಯ, ಜನಜಾಗೃತಿ ವಲಯಧ್ಯಕ್ಷ ಲೋಕನಾಥ್ ಅಮೆಚೂರು,ಅರಂಬೂರು ಒಕ್ಕೂಟ ಅಧ್ಯಕ್ಷ ಚಂದ್ರಶೇಖರ ನೆಡ್ಚಿಲ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಅಮೃತ, ವಾತ್ಸಲ್ಯ ಮನೆಯ ಫಲಾನುಭವಿ ತಿಮ್ಮಪ್ಪ ಮಮತಾ ಉಪಸ್ಥಿತರಿದ್ದರು. ಶೌರ್ಯ ವಿಪತ್ತು ನಿರ್ವಹಣೆ ಘಟದ ಸ್ವಯಂಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು.ಸುಳ್ಯ ಯೋಜನಾಧಿಕಾರಿಗಳಾದ ನಾಗೇಶ್ ಸ್ವಾಗತಿಸಿ, ಸಂಪಾಜೆ ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆ ಧನ್ಯವಾದ ಮಾಡಿದರು.ಜ್ಞಾನವಿಕಾಸ ಸಮನ್ವಯಧಿಕಾರಿ ಭಾರತಿ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!