ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ 2022-23ನೇ ಸಾಲಿನ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಪೂರ್ವಭಾವೀ ಚಟುವಟಿಕೆಗಳಿಗೆ ದಿ.೦8ರಂದು ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ರಂಜಿತ್ ಮಾರ್ಕ್ ಸಾಮ್ಯುವೆಲ್, ಅಸೋಸಿಯೇಟ್ ಡೈರೆಕ್ಟರ್, ಬಯೋ ಮೆಡಿಕಲ್ ಸರ್ವಿಸರ್, ಮಣಿಪಾಲ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಶ್ರೀಯುತರು ವಿದ್ಯಾರ್ಥಿಗಳನ್ನುದ್ದೇಶಿಸಿ “ಲೀಡರ್ ವಿತ್ ಔಟ್ ಟೈಟಲ್” ಎಂಬ ವಿಷಯದ ಮೇಲೆ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವ ಕಲೆಗಳನ್ನು ವಿವರಿಸಿದರು. ಕಠಿಣ ಪರಿಶ್ರಮ, ಶಿಸ್ತು, ಶ್ರದ್ಧೆ ಇವೇ ಮುಂತಾದವುಗಳನ್ನು ಒಳಗೊಂಡ ಅಧ್ಯಯನವು ವಿದ್ಯಾರ್ಥಿಗಳಿಗೆ ಯಶಸ್ಸನ್ನು ತಂದು ಕೊಡುತ್ತವೆ ಎಂದು ಕಿವಿ ಮಾತು ಹೇಳಿದರು. ಡಾ. ರೇಣುಕಾಪ್ರಸಾದ್ ಕೆ.ವಿ., ಪ್ರಧಾನ ಕಾರ್ಯದರ್ಶಿಗಳು, ಎ.ಒ.ಎಲ್.ಇ(ರಿ) ಕುರುಂಜಿಬಾಗ್, ಸುಳ್ಯ ಇವರು ಕಾರ್ಯಕ್ರಮದ ಗೌರವ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಶುಭಹಾರೈಸಿ ಟ್ರೆöನಿಂಗ್ ಮತ್ತು ಪ್ಲೇಸಮೆಂಟ್ ನಿಂದ ಕೊಡಲ್ಪಡುವ ಎಲ್ಲಾ ತರಬೇತುಗಳನ್ನು ಉಪಯೋಗಿಸಿಕೊಂಡು ಉತ್ತಮ ನೌಕರಿಯನ್ನು ಪಡೆಯುವಲ್ಲಿ ಯಶಸ್ವಿಯಾಗಬೇಕೆಂದು ಹಾರೈಸಿದರು. ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ., ವಿದ್ಯಾರ್ಥಿ ಹಾಗೂ ಪೋಷಕರನ್ನು ಉದ್ದೇಶಿಸಿ ಹಿತವಚನವನ್ನು ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ ವಿ ವಿಭಾಗದ ಮುಖ್ಯಸ್ಥರುಗಳನ್ನು ಪರಿಚಯಿಸಿ, ಕಾಲೇಜಿನಲ್ಲಿರುವ ಸಂಪನ್ಮೂಲಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ವಿದ್ಯಾರ್ಥಿ ಜೀವನದಲ್ಲಿ ಯಶಸ್ಸನ್ನು ಗಳಿಸಿ ಎಂದು ಹಾರೈಸಿದರು. ಡೀನ್ ಅಕಾಡೆಮಿಕ್ ಹಾಗೂ ಮೆಕ್ಯಾನಿಕ ಕಲಾ ಭಾಗದ ಇಂಜಿನಿಯರಿಂಗ್ ಮುಖ್ಯಸ್ಥರು ಡಾ. ಉಮಾಶಂಕರ್ ಕೆ.ಎಸ್. ಮಾತನಾಡಿ ಕಾಲೇಜಿನ ಎಲ್ಲಾ ಶೈಕ್ಷಣಿಕ, ಸಾಂಸ್ಕೃತಿಕ ವಿಷಯಗಳ ಬಗ್ಗೆ ವಿವರಣೆ ನೀಡಿ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಾಂಸ್ಕೃತಿಕ ಹಾಗೂ ಆಟೋಟ ಚಟುವಟಿಕೆಗಳಲ್ಲೂ ಭಾಗವಹಿಸಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಡರಾಗಿರಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಿವಿಲ್ವಿ ಇಂಜಿನಿಯರಿಂಗ್ ಭಾಗದ ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಎ., ಕಂಪ್ಯೂಟರ್ ಸೈನ್ಸ್ ಇಂಜಿನಿಯರಿoಗ್ ವಿಭಾಗದ ಪ್ರೊಫೆಸರ್ ಡಾ. ಸ್ಮಿತಾ ಎಂ.ಎಲ್., ಎಲೆ ಟ್ರಾನಿಕ್ಸ್ & ಕಮ್ಯುನಿಕೇಶನ್ ವಿಭಾಗ ಮುಖ್ಯ ಸ್ಥ ಡಾ. ಕುಸುಮಾಧರ ಎಸ್., ಎಂ.ಬಿ.ಎ. ವಿಭಾಗ ಮುಖ್ಯಸ್ಥರು ಪ್ರೊ. ಕೃಷ್ಣಾನಂದ ಎ., ಬೌತಶಾಸ್ತ್ರ ವಿಭಾಗ ಮು ಖ್ಯಸ್ಥರು ಹಾಗು ಡೀನ್-ಎಕ್ಸಾಮಿನೇಶನ್ ಡಾ. ಪ್ರವೀಣ ಎಸ್.ಡಿ., ರಸಾಯನ ಶಾಸ್ತ ವಿಭಾಗ ಮುಖ್ಯಸ್ಥರಾದ ಡಾ. ಸುರೇಖ ಎಂ., ಪ್ಲೇಸ್‌ಮೆ೦ಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ.ವಿ., ಡೀನ್-ಅಡ್ಮಿಶನ್ ಪ್ರೊ. ಬಾಲಪ್ರದೀಪ್ ಕೆ.ಎನ್., ಡೀನ್-ಹಾಸ್ಟೆಲ್ ಡಾ. ಭಾಗ್ಯ ಹೆಚ್.ಕೆ., ಡೈರೆಕ್ಟರ್ ಆಫ್ ಪಿ.ಜಿ. ಸ್ಟಡೀಸ್ ಡಾ. ಸವಿತಾ ಎಂ., ಡೀನ್-ರೀಸರ್ಚ್ ಡಾ. ಸವಿತಾ ಸಿ.ಕೆ., ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಡಾ. ಪ್ರಜ್ಞಾ ಎಂ.ಆರ್., ಪ್ರೊ. ಲೋಕೇಶ್ ಪಿ.ಸಿ., ಸಿವಿಲ್ ಇಂಜಿನಿಯರಿoಗ್ ವಿಭಾಗದ ಪ್ರೊಫೆಸರ್ ಡಾ. ಲೇಖಾ ಬಿ.ಎಮ್., ಕಾಲೇಜಿನ ಆಡಳಿತಾಧಿಕಾರಿ ನಾಗೇಶ್ ಕೊಚ್ಚಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಭಾಸ್ಕರ್ ಎಸ್. ಬೇಲೆಗದ್ದೆ ಮತ್ತು ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲರು ಡಾ. ಶ್ರೀಧರ್ ಕೆ.ಯವರು ಸ್ವಾಗತಿಸಿ, ಟ್ರೆನಿಂಗ್ & ಪ್ಲೇಸ್‌ಮೆಂಟ್ ಆಫಿಸರ್ ಪ್ರೊ. ಅನಿಲ್ ಬಿ.ವಿ., ಅತಿಥಿಗಳನ್ನು ಪರಿಚಯಿಸಿದರು. ಸಿವಿಲ್ ಇಂಜಿನಿಯರಿoಗ್ ವಿಭಾಗದ ಪ್ರಾಧ್ಯಾಪಕಿ ಪ್ರೊ. ಅಶ್ವಿಜ ಕೆ.ಸಿ ವಂದನಾರ್ಪಣೆಗೈದರು. ಪ್ರಾಧ್ಯಾಪಕರುಗಳಾದ ಅರುಣ ಪಿ.ಜಿ. ಮತ್ತು ಅಶ್ವಿಜ ಕೆ.ಸಿ ಕಾರ್ಯಕ್ರಮ ನಿರೂಪಿಸಿದರು. 3ನೇ ಸೆಮಿಸ್ಟರ್ ವಿದ್ಯಾರ್ಥಿನಿ ಕು. ಹರ್ಷಿತಾ ಆರ್. ಪ್ರಾರ್ಥನೆಗೈದರು.
- Friday
- November 1st, 2024