ರೋವರ್ ಮತ್ತು ರೇಂಜರ್ ಘಟಕ ದ ವತಿಯಿಂದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಅಭಿ ವಿನ್ಯಾಸ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಪ್ರಾಂಶುಪಾಲರಾದ ಪ್ರೊಫೆಸರ್ ರುದ್ರ ಕುಮಾರ್ ಎಂ ಎಂ ಇವರು ವಹಿಸಿ ಪ್ರಥಮ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರೋವರ್ ಮತ್ತು ರೇಂಜರ್ ಘಟಕಗಳಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕೆಂದು ಹಾಗೂ ಸಮಾಜದಲ್ಲಿ ಸತ್ಪ್ರಜೆಯಾಗಿ ಬೆಳೆಯಬೇಕೆಂದು ಆಶಿಸಿದರು. ಈ ಅಭಿನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶಾಂತರಾವ್ ಪ್ರಭು ಎ ಎಲ್ ಟಿ, ಬಿಎಸ್ಜಿ ದಕ್ಷಿಣ ಕನ್ನಡ ಇವರು ವಿದ್ಯಾರ್ಥಿಗಳಿಗೆ ರೋವರ್ ರೇಂಜರ್ ಘಟಕದ ಸದಸ್ಯರಾಗಿ ನೋಂದಾವಣಿಯನ್ನು ಮಾಡುವುದರ ಮುಖಾಂತರ ವಿದ್ಯಾರ್ಥಿಗಳು ಸಮಾಜದ ಒಬ್ಬ ಆದರ್ಶ ವ್ಯಕ್ತಿಯನ್ನಾಗಿ ಈ ಘಟಕವು ಕಾರ್ಯವನ್ನು ನಿರ್ವಹಿಸುತ್ತದೆ.
ಹಾಗೇಯೇ ಆಳ್ವಾಸ್ ಕಾಲೇಜು ಮೂಡಬಿದ್ರೆಯಲ್ಲಿ ನಡೆಯುವ ವಿಶ್ವ ಸಾಂಸ್ಕೃತಿಕ ಜಾಂಬೂರಿಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಹಾಗೇಯೇ ರೋವರ್ ಮತ್ತು ರೇಂಜರ್ ಘಟಕದ ಚಟುವಟಿಗಳನ್ನು ವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಜೂನ್ ತಿಂಗಳಲ್ಲಿ ನಡೆದ ಬೇಸಿಗೆ ಶಿಬಿರ ದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಕಾರ್ಯಕ್ರಮದಲ್ಲಿ ರೋವರ್ ಮತ್ತು ರೇಂಜರ್ ವಿದ್ಯಾರ್ಥಿಗಳು ಹಾಗು ಘಟಕದ ನಾಯಕರದ ಉಮೇಶ್ ಹಾಗೂ ಶೋಭಾ ಎ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಅಶ್ವಿನಿ ಕೆ ಜೆ ರೇಂಜರ್ ವಿದ್ಯಾರ್ಥಿ ಸ್ವಾಗತಿಸಿ, ಮೇಘನಾ ಎಸ್ ರೇಂಜರ್ ವಿದ್ಯಾರ್ಥಿ ಕಾರ್ಯಕ್ರಮವನ್ನು ನಿರೂಪಿಸಿದರು.