ಸುಳ್ಯದ ಹಳೆಗೇಟಿನಲ್ಲಿರುವ ಆಯುರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸಾ ಶಿಬಿರ ನ.13 ಭಾನುವಾರ ನಡೆಯಲಿದೆ. ಮೂಲವ್ಯಾಧಿ(ಪೈಲ್ಸ್) ಭಗಂದರ(ಪಿಸ್ಟುಲಾ),ಫಿಶರ್ ಮೊದಲಾದ ಗುದರೋಗಗಳ ತಪಾಸಣೆ, ಚಿಕಿತ್ಸೆ ಹಾಗು ಅವಶ್ಯಕತೆ ಕಂಡು ಬಂದಲ್ಲಿ ಕಾರ ಚಿಕಿತ್ಸೆ ಶಿಬಿರ ನಡೆಯಲಿದೆ. ನ.15ರಂದು ಬೆಳಿಗ್ಗೆ 11ಗಂಟೆಯಿಂದ ಅಪರಾಹ್ನ 3 ರ ತನಕ ಶಿಬಿರ ನಡೆಯಲಿದ್ದು ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಿ ತಪಾಸಣೆ, ಚಿಕಿತ್ಸೆ ನೀಡಲಿದ್ದಾರೆ ಎಂದು ಅಯುರ್ಧಾಮ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಹರಿಪ್ರಸಾದ್ ಶೆಟ್ಟಿ ಯಂ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Saturday
- November 23rd, 2024