ಹಲವು ಸಾಂಸ್ಕ್ರತಿಕ,ಧಾರ್ಮಿಕ ಹಾಗೂ ಸಮಾಜ ಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಫ್ರೆಂಡ್ಸ್ ಬೆಳ್ಳಾರೆ ತಂಡ ಇದೀಗ ಕಮರಿದ ಕನಸಿಗೆ ಮಿಡಿಯುವ ಮನಸ್ಸು ಎಂಬ ಧ್ಯೇಯ ದೊಂದಿಗೆ ಕಷ್ಟದ ಕುಟುಂಬಕ್ಕೆ ಆರ್ಥಿಕವಾಗಿ ನೆರವು ನೀಡುವ ಯೋಜನೆ ಹಾಕಿಕೊಂಡು ನವರಾತ್ರಿಯ ಒಂದು ದಿನ ವಿವಿಧ ವೇಷಭೂಷಣಗಳೊಂದಿಗೆ ಬೆಳ್ಳಾರೆ ಆಸುಪಾಸಿನಲ್ಲಿ ತೆರಳಿ ಮತ್ತು ಗೂಗಲ್ ಪೇ ಮೂಲಕ ಹಣ ಸಂಗ್ರಹ ಮಾಡಲಾಯಿತು. ಒಟ್ಟು ಸಂಗ್ರಹವಾದ 55 ಸಾವಿರ ಮೊತ್ತವನ್ನು ಮೂರು ಕುಟುಂಬಗಳಿಗೆ ಹಂಚಲಾಯಿತು. ಬೆಳ್ಳಾರೆ ಗ್ರಾಮದ ಮಂಡೇಪು ನಿವಾಸಿಯಾಗಿದ್ದು ಮರದಿಂದ ಬಿದ್ದು ಸೊಂಟದಿಂದ ಕೆಳಗೆ ತನ್ನ ಸ್ವಾಧೀನತೆಯನ್ನು ಕಳೆದುಕೊಂಡಿರುವ ರಮೇಶ್ ಪ್ರಭು ಇವರ ಚಿಕಿತ್ಸಾ ವೆಚ್ಚಕ್ಕಾಗಿ ರೂ 25 ಸಾವಿರ ಮತ್ತು ಪುತ್ತೂರು ತಾಲೂಕಿನ ಮಾಡವು ಬಾಡಿಗೆ ಮನೆಯಲ್ಲಿ ವಾಸವಿರುವ ಶ್ರೀಮತಿ ಬೇಬಿ ಇವರ ಕುಟುಂಬಕ್ಕೆ ರೂ. 5ಸಾವಿರ ಮತ್ತು ಕುಟುಂಬದ ಊಟ ಉಪಚಾರದ ಎಲ್ಲಾ ದಿನಸಿ ಸಾಮಾಗ್ರಿಗಳ ಖರೀದಿಗೆ ರೂ. 15 ಸಾವಿರ ಹಾಗೂ ರೂ.10 ಸಾವಿರ ಮೊತ್ತ ವನ್ನು ಕಡಬ ತಾಲೂಕು ಮಲೆಕ್ಕಯಿ ಕಡಬ ಜೋಕಿಮ್ಸ್ ಶಾಲೆಯ 4 ನೇ ತರಗತಿ ವಿದ್ಯಾರ್ಥಿ ಆಕಾಶ್ ಕುಮಾರ್ ಅಸೌಖ್ಯ ದಿಂದ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯಲ್ಲಿ ಸುಮಾರು ದಿನಗಳಿಂದ ಚಿಕಿತ್ಸೆ ಪಡೆಯುತಿದ್ದು ಈ ವಿದ್ಯಾರ್ಥಿಯ ಚಿಕಿತ್ಸೆ ವೆಚ್ಚಕ್ಕಾಗಿ ನೀಡುವ ಮೂಲಕ ಪ್ರೆಂಡ್ಸ್ ಬೆಳ್ಳಾರೆ ತಂಡ ಸಾಮಾಜಿಕ ಕಳಕಳಿ ಮೆರೆದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
- Friday
- November 1st, 2024