ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ , ಸುವಿಚಾರ ಸಾಹಿತ್ಯ ವೇದಿಕೆ ಸುಳ್ಯ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ನಡೆಯುತ್ತಿರುವ ಸಾಹಿತ್ಯ ಸಂಭ್ರಮ 2022 ರ ಅಂಗವಾಗಿ ಭಾವನ ಸುಗಮ ಸಂಗೀತ ಬಳಗ ಸುಳ್ಯ ಇವರ ಸಹಯೋಗದೊಂದಿಗೆ ಗುತ್ತಿಗಾರು ಸರಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ಗಾನ ಯಾನ – ಗೀತ ಗಾಯನ ಕಾರ್ಯಕ್ರಮವು ನ.2 ರಂದು ನಡೆಯಿತು.
ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸುವಿಚಾರ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲ್ ವಹಿಸಿದ್ದರು. ಉದ್ಘಾಟನೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಲೋಕೇಶ್ ಡಿ. ಆರ್ ನೆರವೇರಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಉಪನ್ಯಾಸಕಿ ಜಕೀನ, ಪ್ರಭಾರ ಮುಖ್ಯ ಶಿಕ್ಷಕರಾದ ನೆಲ್ಸನ್ ಕ್ಯಾಸ್ಟ್ರೋಲಿನ , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಮಚಂದ್ರ ಪಲ್ಲತ್ತಡ್ಕ ,ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ತೇಜಸ್ವಿ ಕಡಪಳ, ಕಾರ್ಯಕ್ರಮ ಸಂಯೋಜಕರಾದ ಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕರಾದ ಯೋಗೀಶ್ ಹೊಸೊಳಿಕೆ ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ಭಾವನಾ ಸುಗಮ ಸಂಗೀತ ಸುಳ್ಯ ಅಧ್ಯಕ್ಷರಾದ ಗಾಯಕ ಕೆ.ಆರ್ ಗೋಪಾಲಕೃಷ್ಣ ಮತ್ತು ನೇಸರ ಕಲಾತಂಡ ಮೆಟ್ಟಿನಡ್ಕದ ಗಾಯಕ ರಮೇಶ್ ಮೆಟ್ಟಿನಡ್ಕ ಅವರು ಗಾನಯಾನ – ಗೀತ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕನ್ನಡ ನಾಡು ನುಡಿಗೆ ಸಂಬಂಧಿಸಿದ ಗೀತೆಗಳನ್ನು ಶಿಕ್ಷಕರು ವಿದ್ಯಾರ್ಥಿಗಳು ಜೊತೆ ಜೊತೆಯಾಗಿ ಹಾಡಿ ಚಪ್ಪಾಳೆ ತಟ್ಟಿ ಸಾಹಿತ್ಯ ಸಂಭ್ರಮದ ಯಶಸ್ವಿಗೆ ಸಹಕರಿಸಿದರು. ಗ್ರಾಮ ಪಂಚಾಯತ್ ಗ್ರಂಥ ಪಾಲಕಿ ಅಭಿಲಾಷ ಮೊಟ್ನೂರು ಶಿಕ್ಷಕರು ವಿದ್ಯಾರ್ಥಿಗಳು ಪೋಷಕರು ಪಾಲ್ಗೊಂಡಿದ್ದರು .ಮುಖ್ಯ ಶಿಕ್ಷಕರು ಸ್ವಾಗತಿಸಿ ಶಿಕ್ಷಕರಾದ ರಂಜಿತ್ ವಂದಿಸಿದರು .ಶಿಕ್ಷಕಿಯರಾದ ಚೈತ್ರ , ಜೀವಿತ ಸುರೇಶ್ ಗಾಯಕರನ್ನು ಗೌರವಿಸಿದರು.
- Thursday
- November 21st, 2024