⏩⏩ಅಮರ ಸುದ್ದಿ ವಿಶೇಷ⏩⏩ ಕರೋನಾ ಲಾಕ್ಡೌನ್ ನಿಂದ ಸಂಕಷ್ಟಕ್ಕೊಳ ರಬ್ಬರ್ ಕೃಷಿಕರಿಗೆ ಧಾರಣೆ ಕಡಿಮೆಯಾಗಿದ್ದರಿಂದ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಇದೀಗ ಸ್ವಲ್ಪ ಚೇತರಿಕೆ ಕಂಡುಬರುತ್ತಿದ್ದು ರೈತರು ತುಸು ನಿಟ್ಟುಸಿರು ಬಿಡುವಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕು ಅತಿಹೆಚ್ಚು ರಬ್ಬರ್ ಬೆಳೆಗಾರರರನ್ನು ಹೊಂದಿದೆ. ದರ ಇಳಿಕೆಯಿಂದ ಈ ಬಾರಿ ಕೆಲವು ಕೃಷಿಕರು ರಬ್ಬರ್ ಟ್ಯಾಪಿಂಗ್ ಮಾಡದೆ ಹಾಗೆ ಬಿಟ್ಟಿದ್ದಾರೆ. ಕಡಿಮೆ ದರ ಇರುವಾಗ ಟ್ಯಾಪಿಂಗ್ ಮಾಡಿದರೆ ಕಾರ್ಮಿಕರಿಗೆ ಸಂಬಳ ಕೊಡುವುದು ಕಷ್ಟವಾಗುತ್ತದೆ ಎಂದು ಮಳೆಗಾಲ ಪ್ಲಾಸ್ಟಿಕ್ ಹಾಕದವರು ಇದ್ದಾರೆ. ಲಾಕ್ಡೌನ್ ಬಳಿಕ ಖಾಸಗಿ ರಬ್ಬರ್ ಖರೀದಿದಾರರು 70 100 ದರ ನಿಗದಿ ಪಡಿಸಿ ಖರೀದಿಸುತ್ತಿದ್ದರು. ಅನಿವಾರ್ಯವಿದ್ದ ರೈತರು ಅದೇ ರೇಟ್ ಗೆ ಮಾರಾಟ ಮಾಡಿದ್ದರು. ಲಾಕ್ಡೌನ್ ಸಡಿಲಿಕೆ ಬಳಿಕ ರೈತರ ನೆರವಿಗೆ ಬಂದ ಗುತ್ತಿಗಾರು ರಬ್ಬರ್ ಸೊಸೈಟಿ ಕೆಜಿ ಗೆ ರೂ 110 ದರ ನಿಗದಿಪಡಿಸಿ ಖರೀದಿ ಆರಂಭ ಮಾಡಿತ್ತು. ಬಳಿಕ ರಬ್ಬರ್ ಧಾರಣೆ ಚೇತರಿಕೆ ಕಂಡಿತು. ಇದೀಗ ರಬ್ಬರ್ ಧಾರಣೆ 120 ಸನಿಹದಲ್ಲಿದೆ. ಆದರೂ ರೈತರ ಖರ್ಚು ವೆಚ್ಚಗಳನ್ನು ಗಮನಿಸಿದಾಗ ಕೆಜಿ ಗೆ ರೂ 150 ಆದರೂ ಬೇಕು ಎಂಬುದು ಕೃಷಿಕರ ಬೇಡಿಕೆ.
ಲಾಕ್ ಡೌನ್ ಸಡಿಲಗೊಂಡರೂ ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳೂ ಸರಿಯಾಗಿ ಆರಂಭವಾಗದೇ,ಕೈಗಾರಿಕೆಗಳಿಗೆ ಈಗ ಕಾರ್ಮಿಕರ ಆಗಿರುವುದು ರಬ್ಬರ್ ಕೃಷಿಕರಿಗೆ ಹೊಡೆತ ನೀಡಿದೆ. ಪ್ಲಾಸ್ಟಿಕ್, ಟಯರ್ ಹಾಗೂ ರಬ್ಬರನ್ನು ಕಚ್ಛಾವಸ್ತುವನ್ನಾಗಿ ಬಳಸುವ ಕೈಗಾರಿಕೆಗಳು ಆರಂಭವಾದರೇ ಮಾತ್ರ ರೈತರ ಬೇಡಿಕೆ ಈಡೇರಲು ಸಾಧ್ಯ. ಸರಕಾರ ರೈತರಿಗೆ ಬೆಂಬಲ ಬೆಲೆ ನೀಡಬೇಕೆಂಬ ಬೇಡಿಕೆಗೆ ಇನ್ನೂ ಯಾವ ಸರ್ಕಾರಗಳು ಗಮನಹರಿಸಿಲ್ಲ.
ಈ ಬಗ್ಗೆ ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಯವರನ್ನು ಮಾತನಾಡಿಸಿದಾಗ “ಸುಳ್ಯ ತಾಲೂಕಿನಲ್ಲಿ ಕೆಲ ರೈತರು ರಬ್ಬರ್ ಕೃಷಿಯನ್ನೆ ಅವಲಂಬಿಸಿದ್ದಾರೆ. ಲಾಕ್ ಡೌನ್ ಕುಸಿತಗೊಂಡಿದ್ದ ಧಾರಣೆಯನ್ನು ಗಮನಿಸಿ ರೂ 110 ದರ ನಿಗದಿಪಡಿಸಿ ಸೊಸೈಟಿ ವತಿಯಿಂದ ಖರೀದಿಸಿದ್ದು ರೈತರಿಗೆ ನೆರವಾಯಿತು. ಇನ್ನೂ ಮದ್ರಾಸ್ ,ಚೆನ್ನೈ ಮೂಲದ ಕಂಪೆನಿ, ಎಂ.ಆರ್.ಎಫ್ ಟಯರ್ ಕಂಪೆನಿಗಳು ಪೂರ್ತಿ ಕಾರ್ಯರಂಭ ಮಾಡಿದಾಗ ಮಾತ್ರ ದರ ಜಾಸ್ತಿಯಾಗಲು ಸಾಧ್ಯ. ಆದರೇ ಸರಕಾರ ರೈತರ ಬಗ್ಗೆ ಕಾಳಜಿ ವಹಿಸಿ ಬೆಂಬಲ ಬೆಲೆ ನಿಗದಿಪಡಿಸಿಬೇಕು. ಕೇರಳ ಸರಕಾರ ಮಾಡಿರುವಂತೆ ಇಲ್ಲೂ ಕೂಡ ರೂ 150 ಬೆಂಬಲ ಬೆಲೆ ನೀಡಬೇಕು ಎಂದು ನಾವು ಹಲವಾರು ಭಾರಿ ಒತ್ತಾಯಿಸುತ್ತ ಬಂದಿದ್ದೇವೆ” ಎಂದರು.