Ad Widget

ವಳಲಂಬೆ : ಅನಾರೋಗ್ಯದಿಂದ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ ಸ್ಥಳೀಯರು – ಚಿಕಿತ್ಸೆ ಫಲಿಸದೇ ಮೃತ್ಯು

. . . . . . . . .

ವಳಲಂಬೆಯ ಹೊಳೆ ಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಸ್ಥಳೀಯರು ಹಾಗೂ ಗುತ್ತಿಗಾರಿನ ಅಮರ ಚಾರಿಟೇಬಲ್ ಟ್ರಸ್ಟ್ ನ ಸಹಕಾರದೊಂದಿಗೆ ಆಸ್ಪತ್ರೆಗೆ ಸಾಗಿಸಿ ರಕ್ಷಿಸುವ ಕಾರ್ಯ ಮಾಡಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಅಪರಿಚಿತ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.

. . . . . . .

ವಳಲಂಬೆ ಯ ಹೊಳೆಯ ಬದಿಯ ಬಂಡೆ ಕಲ್ಲಿನ ಮೇಲೆ ಬಿದ್ದು ಬಿಸಿಲ ಬೇಗೆಗೆ ಅಪರಿಚಿತ ವ್ಯಕ್ತಿ ಹೊರಳಾಡುತ್ತಿದ್ದುದನ್ನು ಕಂಡ ಸ್ಥಳೀಯರು ಗುತ್ತಿಗಾರಿನ ಅಮರ ಚಾರಿಟೇಬಲ್ ಟ್ರಸ್ಟ್ ನ ಚಂದ್ರಶೇಖರ ಕಡೋಡಿರವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಟ್ರಸ್ಟ್ ಆಂಬ್ಯುಲೆನ್ಸ್, ಗುತ್ತಿಗಾರು ಪ್ರಾ.ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಪ್ರಥಮ ಚಿಕಿತ್ಸೆ ನೀಡಿ ಅವರನ್ನು ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ಸವಿತ, ಸಹಾಯಕ ತಿಮ್ಮಪ್ಪ ಗೌಡ, ಸಹಾಯಕಿ ಪ್ರೇಮಾ, ಆಸ್ಪತ್ರೆಗೆ ಸಾಗಿಸಲು ನೆರವಾದ ಮರಿಯಪ್ಪ ಮಾವಜಿ, ರಂಜಿತ್ ಪೈಕ, ರವೀಂದ್ರ ಹೊಸೊಳಿಕೆ, ಸುಕೇಶ್ ಅಡ್ಡನಪಾರೆ, ಗಂಗಾಧರ್ ಅಡ್ಡನಪಾರೆ, ಸುಧಾಕರ ಪಂಜಿಪಳ್ಳ, , ಅಂಬ್ಯುಲೆನ್ಸ್ ಚಾಲಕ ರಾಜೇಶ್ ಉತ್ರಂಬೆ ಸಹಕಾರ ನೀಡಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading