ಲಡಾಖ್: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವೆ ಘರ್ಷಣೆ ಸಂಭವಿಸಿದ್ದು, ಚೀನಿ ಸೈನಿಕರ ದಾಳಿಯ ಪರಿಣಾಮವಾಗಿ ಭಾರತೀಯ ಸೇನೆಯ ಓರ್ವ ಸೈನ್ಯಾಧಿಕಾರಿ ಹಾಗೂ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.
ಗಡಿಯಿಂದ ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ ಚೀನಿ ಸೈನಿಕರು ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ ಎನ್ನಲಾಗಿದೆ.
ನಿನ್ನೆ ತಡರಾತ್ರಿ ನಡೆದ ಘರ್ಷಣೆಯಲ್ಲಿ ಭಾರತೀಯ ಸೇನೆಯ ಓರ್ವ ಸೈನ್ಯಾಧಿಕಾರಿ ಹಾಗೂ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.
ತಂಟೆಗೆ ಬಂದರೆ ಬಿಟ್ಟೇವಾ? ಚೀನಾದ ೫ ಸೈನಿಕರು ಹತ:
ಲಡಾಕ್ ಗಡಿಯಲ್ಲಿ ಚೀನಾ ಕ್ಯಾತೆ ತೆಗೆದು ನಡೆದ ಚಕಮಕಿಯಲ್ಲಿ ಚೀನಾ ದ ೫ ಯೋಧರು ಹತರಾಗಿದ್ದಾರೆ. ಈ ಮೂಲಕ ಭಾರತೀಯ ಸೇನೆ ಚೀನಾಗೆ ತಕ್ಕ ಉತ್ತರ ನೀಡಿದೆ.
ಚೀನಾದ ೧೧ ಮಂದಿ ಸೈನಿಕರೂ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ಭಾರತೀಯ ಸೇನೆ ಮಾಹಿತಿ ನೀಡಿದ್ದು, ಕಿರಿಕ್ ಚೀನಾವನ್ನು ಭಾರತದ ಯೋಧರು ಹೆಡೆಮುರಿ ಕಟ್ಟಿದ್ದಾರೆ.
ಚೀನಾ ಯೋಧರ ಸಾವಿನ ಕುರಿತಂತೆ ಚೀನಾ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಭಾರತೀಯ ಯೋಧರು ಮೃತಪಟ್ಟಿರುವ ಕುರಿತು ಟ್ವೀಟ್ ಮಾಡಿದೆ.
ಶಾಂತಿ ಮಾತುಕತೆ ಬಳಿಕವೂ ಚೀನಿ ಸೈನಿಕರು ಉದ್ಧಟತನ ಮೆರೆದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇಂದು ಮಧ್ಯಾಹ್ನ ಈ ಕುರಿತು ತುರ್ತು ಸಭೆ ಕರೆದಿರುವ ರಕ್ಷಣಾ ಸಚಿವಾಲಯ ಮುಂದಿನ ಹಾದಿ ಬಗ್ಗೆ ಚಿಂತನೆ ನಡೆಸಲಿದೆ ಎಂದು ಹೇಳಲಾಗಿದೆ