ಆಲೆಟ್ಟಿ ಗ್ರಾಮದ ದರ್ಖಾಸು ಸೇತುವೆ ಪ್ರಾರಂಭದಿಂದ ಹಿಡಿದು ಉದ್ಘಾಟನೆ ವೇಳೆವರೆಗೂ ರಾಜಕೀಯ ಮೆಳೈಸಿತು.
ಸ್ಥಳೀಯ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ನಡೆದ ಉದ್ಘಾಟನೆ ನಡೆದಿದೆ.ಇನ್ನೂ ಬಿಜೆಪಿ ಅಥವಾ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಕೂಡ ಉದ್ಘಾಟನೆ ಇದೆಯೇ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ.
ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ಸುಳ್ಯ ತಾಲೂಕು ಅಲೆಟ್ಟಿ ಗ್ರಾಮದ ತೊಟಕೊಚ್ಚಿ ಪುತ್ಯ ರಸ್ತೆಯ ದರ್ಖಾಸು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ರೂ 18 ಲಕ್ಷ ಮಂಜೂರುಗೊಂಡಿದ್ದು ಸೇತುವೆಯ ಕಾಮಗಾರಿ ಸಂಪೂರ್ಣಗೊಂಡಿದ್ದು ಇದರ ಉದ್ಘಾಟಣೆಗೆ ಜನ ಕಾಯುತ್ತಿದ್ದರು. ಇದರ ನಿರ್ಮಾಣಕ್ಕೆ ಪ್ರಯತ್ನಿಸಿದ ಗ್ರಾ.ಪಂ.ಸದಸ್ಯೆ ಗೀತಾ ಕೊಲ್ಚಾರ್ ನೇತೃತ್ವದಲ್ಲಿ ಉದ್ಘಾಟನೆಗೆ ಕಾರ್ಯಕ್ರಮ ಆಯೋಜನೆ ನಡೆದಿತ್ತು. ಇವರೇ ದಿನ ನಿಗದಿ ಪಡಿಸಿ, ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿ ಆಮಂತ್ರಣ ಸಿದ್ಧಪಡಿಸಿದ್ದರು.
ಆದರೇ ಇದಕ್ಕೆ ಒಪ್ಪದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಪತ್ರಿಕಾ ಹೇಳಿಕೆ ನೀಡಿ “
ಜೂನ್ 11 ರಂದು ನಡೆಯುವ ಸೇತುವೆಯ ಉದ್ಘಾಟನೆ ಕಾರ್ಯಕ್ರಮ ನಮ್ಮ ಪ್ರಾಧಿಕಾರದ ವತಿಯಿಂದ ನಡೆಯುವ ಕಾರ್ಯಕ್ರಮ ಆಗಿರುವುದಿಲ್ಲ.
ಕಾರ್ಯಕ್ರಮ ನಡೆದರೆ ಅದು ಗೀತಾ ಕೋಲ್ಚಾರುರವರ ವೈಯುಕ್ತಿಕ ಕಾರ್ಯಕ್ರಮ ಎಂದು ಸ್ಪಷ್ಟನೆ ನೀಡಿತು.
ಹಾಗಾಗಿ ನಿಗದಿಯಾದ ದಿನಾಂಕದಂದೇ ಉದ್ಘಾಟನೆ ಕಾರ್ಯಕ್ರಮವನ್ನು ಸಂಬಂದಪಟ್ಟ ಜನಪ್ರತಿನಿಧಿಗಳು ಬಾರದಿದ್ದರೂ ಊರಿನವರ ಸಮ್ಮುಖದಲ್ಲಿ ಲೊಕಾರ್ಪಣೆ ಮಾಡುವುದೆಂದೂ ತೀರ್ಮಾನಿಸಿದ ಗೀತಾ ಕೋಲ್ಚಾರ್ ನಿಗದಿಯಂತೆ ಕಾರ್ಯಕ್ರಮ ನಡೆಸಿದರು. ಅಂದು ಶಾಸಕರು,ಜಿ.ಪಂ.ಸದಸ್ಯ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗ್ರಾ.ಪಂ. ನ ಯಾರು ಕೂಡ ಬಂದಿರಲಿಲ್ಲ. ಕಾರ್ಯಕ್ರಮವನ್ನು ಊರಿನ ಹಿರಿಯರಾದ ವಿವೇಕಾನಂದ ಗೌಡ ಮತ್ತು ಪುತ್ಯ ಮನೆತನದ ಪಾಂಡುರಂಗ ವೈಲಾಯರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯೆ ಗೀತಾ ಕೋಲ್ಚಾರ್ ರಿಬ್ಬನ್ ಕಟ್ ಮಾಡುವುದರ ಮೂಲಕ ನೂತನ ಸೇತುವೆ ಲೊಕಾರ್ಪಣೆ ಮಾಡಿದರು . ದೀಪ ಬೆಳಗಿಸಿ ಮಾತನಾಡಿದ ಪುತ್ಯ ಪಾಂಡುರಂಗ ವೈಲಯಾರವರು ನಮ್ಮ ಈ ಭಾಗದ ಬಹುದಿನದ ಬೇಡಿಕೆಯಾದ ಸೇತುವೆಯನ್ನು ಮಾಡಿಸಿಕೊಟ್ಟ ಗೀತಾ ಕೋಲ್ಚಾರು , ಮುಸ ಪಿ .ಎಂ, ಧರ್ಮಪಾಲ ಕೊಯಿಂಗಾಜೆಯವರಿಗೆ , ಸೇತುವೆಗೆ ಅನುದಾನ ಒದಗಿಸಿಕೊಟ್ಟ ಶ್ರೀಮತಿ ಶಾರದಾ ಶೆಟ್ಟಿ , ರಮಾನಾಥ ರೈ , ಸರಕಾರಕ್ಕೆ ವಂತಿಗೆ ಪಾವತಿ ಮಾಡಲು ಸಹಕರಿಸಿದ ಹರೀಶ್ ಕಂಜಿಪಿಲಿಯರಿಗೆ ಧನ್ಯವಾದ ಎಂದು ಹೇಳಿದರು . ವಿವೇಕಾನಂದ ಗೌಡ ಕೋಲ್ಚಾರು ಮಾತನಾಡಿ ಸೇತುವೆ ನಿರ್ಮಾಣ ಆದದ್ದು ಸಂತೋಷ ಎಂದರು . ಗೀತಾ ಕೋಲ್ಚಾರು ಮಾತನಾಡಿ ಸೇತುವೆಗೆ ಅನುದಾನವನ್ನು ತಂದಲ್ಲಿಂದ ಹಿಡಿದು ಇಲ್ಲಿಯ ತನಕ ಪ್ರತಿಯೊಂದು ಕೆಲಸಕಾರ್ಯದಲ್ಲಿ ಅಡೆತಡೆ ಮಾಡಿ ಕೆಲಸ ವಿಳಂಬವಾಗಲು ಕಾರಣವಾಯಿತು . ಸರಕಾರಕ್ಕೆ ವಂತಿಗೆ ಪಾವತಿ ಮಾಡಲು ಅಲೆಟ್ಟಿ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ಮಾಡಿ ವಂತಿಗೆ ಪಾವತಿ ಮಾಡಿಸುವ ಪರಿಸ್ಥಿತಿ ಬಂತು. ನಾವು ಶಾರದಾ ಶೆಟ್ಟಿ , ರಮಾನಾಥ ರೈ , ಮಾನ್ಯ ಶಾಸಕರು , ಜಿಲ್ಲಾ ಪಂಚಾಯತ್ ಸದಸ್ಯರು , ಪಂಚಾಯತ್ ಅಧ್ಯಕ್ಷರು , ಕರಾವಳಿ ಪ್ರಾಧಿಕಾರದವರನ್ನೆಲ್ಲ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆವು . ಅದರೆ ಪ್ರಾಧಿಕಾರದವರು ಸ್ಥಳೀಯ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಒಳಗಾಗಿ ಕಾರ್ಯಕ್ರಮ ಮುಂದೂಡುವಂತೆ ಒತ್ತಡ ಹೇರಿದ್ದರು . ಅದರಂತೆ ಪ್ರಾಧಿಕಾರದಿಂದ ಸೇತುವೆ ಉದ್ಘಾಟನೆ ಕಾರ್ಯಕ್ರಮ ಇರುವುದಿಲ್ಲ . ಕಾರ್ಯಕ್ರಮ ನಡೆದರೂ ಅದು ವೈಯಕ್ತಿಕ ಕಾರ್ಯಕ್ರಮ ಎಂದರು . ನಾವಂತೂ ಈ ಭಾಗದ ಜನತೆಗೆ ಕೊಟ್ಟ ಮಾತಿನಂತೆ ಈ ದಿನ ಸೇತುವೆಯ ಲೊಕಾರ್ಪಣೆ ಮಾಡಿದ್ದೇವೆ . ಕಾರ್ಯಕ್ರಮಕ್ಕೆ ಬರದವರು ಇರಲಿ . ಎಲ್ಲರಿಗೂ ಒಳ್ಳೆಯದಾಗಲಿ ಎಂದರು . ಪ್ರಾಸ್ತಾವಿಕವಾಗಿ ಧರ್ಮಪಾಲ ಗೌಡ ಕೊಯಿಂಗಾಜೆ ಮಾತನಾಡಿ ಕಾರ್ಯಕ್ರಮ ನಿರೂಪಿಸಿದ್ದರು . ಮುಸಾ ಪಿ ಎಂ ಎಲ್ಲರನ್ನು ಸ್ವಾಗತಿಸಿದ್ದರು . ಕಾರ್ಯಕ್ರಮದಲ್ಲಿ ಚಂದ್ರ ಕೆ ವಿ ಕೋಲ್ಚಾರು , ದಯಾನಂದ ಪಾತಿಕಲ್ಲು , ಶೈಲೇಶ್ ಪುತ್ಯ , ನಿಸಾರ್ ತೊಟಕೊಚ್ಚಿ, ಹರೀಶ್ ಕೋಲ್ಚಾರ್ , ಅಬೂಬಕರ್ ಪಿ ಎಂ , ರಫಿಕ್ ಪಿ ಎಂ , ಶರೀಫ್ ತೊಟಕೊಚ್ಚಿ , ಅಬ್ದುಲ್ ಫೈಝಿ , ಇಬ್ರಾಹಿಂ ತೊಟಕೊಚ್ಚಿ , ಅಬ್ದುಲ್ಲಾ , ಇಸುಬು , ಅಬ್ದುಲ್ ಅಲಿ , ಇಬ್ರಾಹಿಂ ಎಂ ಪಿ , ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.
- Friday
- November 22nd, 2024