ಜೂನ್ 5 ರಂದು ಮುಲ್ಕಿಯಲ್ಲಿ ಇತ್ತಂಡಗಳ ಘರ್ಷಣೆಯಲ್ಲಿ ಹತ್ಯೆಗೊಳಗಾದ ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಕುಕ್ಕಟ್ಟೆ ನಿವಾಸಿ ಅಬ್ದುಲ್ ಲತೀಫ್ ಅವರನ್ನು ಹಾಡುಹಗಲೇ ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ ದುಷ್ಕರ್ಮಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮುರುಳ್ಯ ಗ್ರಾಮದ ಯೂತ್ ಫ್ರೆಂಡ್ಸ್ ಹಾಗೂ ಸ್ಥಳೀಯ ನಾಗರಿಕರು ಕರ್ನಾಟಕ ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ ನಮ್ಮ ಊರಿನ ಒಬ್ಬ ಯುವಕ ಯಾವುದೇ ಕ್ರಿಮಿನಲ್ ಹಿನ್ನೆಲೆ ಉಳ್ಳವನಾಗದೆ ಅಮಾಯಕ ನಾಗಿದ್ದನು. ಇವರನ್ನು ಭೀಕರವಾಗಿ ಹತ್ಯ ಮಾಡಿರುವುದು, ಘಟನೆಯ ಬಗ್ಗೆ ಮಾಹಿತಿ ತಿಳಿದು ಸೂಕ್ತ ಸಮಯದಲ್ಲಿ ರಕ್ಷಣೆ ಕೊಡದೆ ಕರ್ತವ್ಯಲೋಪ ಎಸಗಿದ ಪೊಲೀಸರ ನಡೆಯು ಸಂಶಯಕ್ಕೆ ಕಾರಣವಾಗಿದೆ .ಅಲ್ಲದೆ ಸಂಬಂಧಿಸಿದ ಎಫ್ ಐ ಆರ್ ವರದಿಯಲ್ಲಿ ಲೋಪ ವಾಗಿರುತ್ತದೆ. ಕೊಲೆಯಾದ ಅಬ್ದುಲ್ ಲತೀಫ್ ನಿಗೆ ವಿದೇಶದಿಂದ ಕೊಲೆ ಬೆದರಿಕೆ ಕರೆ ಮಾಡಿರುವುದರ ಬಗೆಯು ತನಿಖೆ ಯಾಗಿರುವುದಿಲ್ಲ. ಆದ್ದರಿಂದ ಸದ್ರಿ ಪ್ರಕರಣದ ತನಿಖಾಧಿಕಾರಿ ಯನ್ನು ಬದಲಾಯಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಸಂದರ್ಭದಲ್ಲಿ ಯೂತ್ ಫ್ರೆಂಡ್ಸ್ ಮುರುಳ್ಯ ಇದರ ಅಧ್ಯಕ್ಷ ಧರ್ಮರಾಜ್ ಕುಲಾಲ್, ಕಾರ್ಯದರ್ಶಿ ಹರೀಶ್ ಕುಮಾರ್, ಗೌರವ ಸಲಹೆಗಾರ ಅಶ್ರಫ್ ಕಾಸಿಲೆ, ಹಾಗೂ ಸ್ಥಳೀಯರಾದ ಪಿಎಂ ಅಬ್ದುಲ್ ರಹಿಮಾನ್ , ಉಸ್ಮಾನ್ ಕುಕ್ಕಟ್ಟೆ,ಮೊದಲಾದವರು ಉಪಸ್ಥಿತರಿದ್ದರು.
- Friday
- November 22nd, 2024