ಕಳೆದ ಒಂದೆರಡು ತಿಂಗಳಿನಿಂದ ಕುಸಿತದ ಹಂತದಲ್ಲಿರುವ ರಬ್ಬರ್ ಧಾರಣೆ 6 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಆರ್‌ಎಸ್‌ಎಸ್-4 ಗುಣಮಟ್ಟದ ರಬ್ಬರ್‌ಗೆ ಕೆಜಿಗೆ 144 ರೂ.ನಿಂದ 147 ರೂ.ವರೆಗೆ ದರ ಸಿಗುತ್ತಿದೆ. ಮಳೆಗಾಲದಲ್ಲಿ ರಬ್ಬರ್ ಉತ್ಪಾದನೆ ಕಡಿಮೆಯಾಗುವ ಕಾರಣ ರಬ್ಬರ್ ಶೀಟ್ ಧಾರಣೆಯಲ್ಲಿ ಏರಿಕೆಯಾಗಬೇಕಿತ್ತು.
ಆದರೆ ಕಳೆದ ಒಂದೆರಡು ತಿಂಗಳಿನಿಂದ ಕುಸಿತದ ಹಂತದಲ್ಲಿರುವ ರಬ್ಬರ್ ಧಾರಣೆ ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಆರ್‌ಎಸ್‌ಎಸ್-4 ಗುಣಮಟ್ಟದ ರಬ್ಬರ್‌ಗೆ ಕೆಜಿಗೆ 144 ರೂ.ನಿಂದ 147 ರೂ.ವರೆಗೆ ದರ ಲಭಿಸುತ್ತಿದೆ. ಲ್ಯಾಟೆಕ್ಸ್ (ರಬ್ಬರ್ ಹಾಲು) ಬೆಲೆಯೂ ಕುಸಿದಿದ್ದು, ಬಹುತೇಕ ಬೆಳೆಗಾರರು ಟ್ಯಾಪಿಂಗ್ ನಿಲ್ಲಿಸಿದ್ದಾರೆ.ನಿರಂತರ ಮಳೆಯಿಂದಾಗಿ ರಬ್ಬರ್ ಹಾಳೆಗಳ ಕೊರತೆ ಎದುರಾಗಿದ್ದರೂ ಮಾರುಕಟ್ಟೆಯಲ್ಲಿ ರಬ್ಬರ್ ಬೆಲೆ ಕುಸಿದಿದೆ. ಜೂನ್ ಮೊದಲ ವಾರದಲ್ಲಿ 180 ರೂ. ಇದ್ದ ರಬ್ಬರ್ ಬೆಲೆ ಜುಲೈನಲ್ಲಿ 158 ಹಾಗೂ ಈಗ 145 ರೂ.ಗೆ ಕುಸಿದಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ರಬ್ಬರ್ ಬೆಲೆ ಏರಿದ್ದರೂ ಮಳೆಗಾಲವಾದ ಕಾರಣ ಬೆಳೆಗಾರರಿಗೆ ಪ್ರಯೋಜನವಾಗಿಲ್ಲ.ಆಫ್ರಿಕಾ ರಬ್ಬರ್ ಪ್ರಭಾವಆಫ್ರಿಕಾ ದೇಶಗಳಲ್ಲಿ ರಬ್ಬರ್ ಉತ್ಪಾದನೆ ಹೆಚ್ಚಳದಿಂದ ಅಂತಾರಾಷ್ಟ್ರೀಯ ಬೆಲೆ ಕುಸಿದಿದೆ. ಕೋವಿಡ್ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಆಫ್ರಿಕಾದ ರಬ್ಬರ್ ಲಗ್ಗೆ ಇರಿಸಲು ಪ್ರಾರಂಭಿಸಿದೆ. ಕಳೆದ ತಿಂಗಳು 53,000 ಟನ್ ರಬ್ಬರ್ ಆಮದು ಮಾಡಿಕೊಳ್ಳಲಾಗಿದ್ದು, ಅದರಲ್ಲಿ ಶೇ. 25 ಆಫ್ರಿಕಾದಿಂದ ತರಿಸಲಾಗಿದೆ. ಜುಲೈನಲ್ಲಿ 40,000 ಟನ್ ಆಮದು ಮಾಡಿಕೊಳ್ಳಲಾಗಿದ್ದು, ಅದರಲ್ಲಿ 10 ಸಾವಿರ ಟನ್ ಆಫ್ರಿಕಾದಿಂದ ಕಡಿಮೆ ಬೆಲೆಗೆ ಆಮದಾಗಿದೆ.ರಬ್ಬರ್ ಮಾರುಕಟ್ಟೆಯಲ್ಲಿ ಕೃತಕವಾಗಿ ತಯಾರಿಸಲ್ಪಟ್ಟ ರಬ್ಬರ್ ಆಮದು ಹೆಚ್ಚಿರುವುದು ನೈಸರ್ಗಿಕ ರಬ್ಬರ್ ಬೆಲೆ ಕುಸಿತಕ್ಕೆ ಕಾರಣವಾಗುತ್ತಿದೆ. 2013-14ರಲ್ಲಿ 26,655 ಟನ್ ಕೃತಕ ಮಿಶ್ರಣದ ರಬ್ಬರ್‌ನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.
2020-21ರಲ್ಲಿ ಆಮದು 1,14, 636 ಟನ್‌ಗಳಿಗೆ ಏರಿಕೆಯಾಗಿದೆ. ನೈಸರ್ಗಿಕ ರಬ್ಬರ್ ಆಮದು ಸುಂಕ ಶೇ. 25 ಆಗಿದ್ದರೆ, ಕೃತಕ ಮಿಶ್ರಣದ ರಬ್ಬರ್ ಆಮದು ಸುಂಕ ಶೇ. 10 ಮಾತ್ರ ಆಗಿದೆ. ಶೇ. 60ರಷ್ಟು ನೈಸರ್ಗಿಕ ರಬ್ಬರ್‌ಗೆ ಇತರ ರಾಸಾಯನಿಕಗಳನ್ನು ಸೇರಿಸಿ ರಬ್ಬರ್ ಸಂಯುಕ್ತ ತಯಾರಿಸಲಾಗುತ್ತದೆ.ಕೋವಿಡ್ ಬಳಿಕ ಬೇಡಿಕೆ ಇಳಿಕೆ, ಆಮದು ಹೆಚ್ಚಳ, ರಬ್ಬರ್ ಬೆಲೆ ತೀವ್ರ ಕುಸಿತಮಲೇಷ್ಯಾ, ಥೈಲ್ಯಾಂಡ್ ಮೊದಲಾದ ದೇಶಗಳಿಂದ ಹೆಚ್ಚಾಗಿ ರಬ್ಬರ್ ಸಂಯುಕ್ತ ಅಂದರೆ ಕೃತಕ ರಬ್ಬರ್ ಆಮದಾಗುತ್ತಿದೆ. ಟಯರ್ ತಯಾರಿ, ರಬ್ಬರ್ ಮ್ಯಾಟ್, ಮಾತ್ರವಲ್ಲದೆ ಇತರ ರಬ್ಬರ್ ಉತ್ಪನ್ನಗಳ ತಯಾರಿಗೂ ರಬ್ಬರ್ ಸಂಯುಕ್ತ ಬಳಸಲಾಗುತ್ತಿದೆ. ರಬ್ಬರ್ ಸಂಯುಕ್ತದ ಆಮದಿನ ಪ್ರಭಾವವೇ ರಬ್ಬರ್ ಹಾಲಿನ ಬೆಲೆ ಕಡಿಮೆಯಾಗಲೂ ಕಾರಣ ಎಂದು ಹೇಳಲಾಗುತ್ತಿದೆ.ಟಯರ್ ಕಂಪನಿಗಳೂ ಖರೀದಿಸುತ್ತಿಲ್ಲಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಬ್ಬರ್ ಶೀಟ್ 170 ರೂ.ಗೆ ಖರೀದಿಸಲಾಗಿತ್ತು.
ರಬ್ಬರ್‌ಗೆ 170 ರೂ. ಬೆಂಬಲ ಬೆಲೆ ಘೋಷಿಸಲಾಗಿದ್ದರೂ ರಬ್ಬರ್ ಬೋರ್ಡ್ ಬೆಲೆ 155 ರೂ. ಆಗಿದೆ. ಆದರೆ ಉತ್ತಮ ಹಾಳೆಗೂ 150 ರೂ.ಗಿಂತ ಹೆಚ್ಚು ಸಿಗುತ್ತಿಲ್ಲ. ಟಯರ್ ಕಂಪನಿಗಳೂ ರಬ್ಬರ್ ಶೀಟ್ ಖರೀದಿಗೆ ಮುಂದಾಗುತ್ತಿಲ್ಲ.ರಬ್ಬರ್ ಹಾಲು ಮಾರಾಟಟ್ಯಾಪರ್‌ಗಳ ಕೊರತೆ, ನಿರ್ವಹಣೆ ಮತ್ತು ಉತ್ಪಾದನೆ ವೆಚ್ಚ ಹೆಚ್ಚಾಗಿರುವ ಕಾರಣ ಬಹುತೇಕ ಬೆಳೆಗಾರರು ಕಳೆದ ಎರಡು ವರ್ಷಗಳಿಂದ ರಬ್ಬರ್ ಹಾಲನ್ನೇ ಮಾರಾಟ ಮಾಡುತ್ತಿದ್ದಾರೆ. ಆರಂಭದಲ್ಲಿ ಉತ್ತಮ ಬೆಲೆ ಲಭಿಸಿದರೂ ಕಳೆದ ಒಂದೆರಡು ತಿಂಗಳಿನಿಂದ ಲ್ಯಾಟೆಕ್ಸ್ ಬೆಲೆಯೂ ಕುಸಿದಿದೆ. ಒಂದು ಹಂತದಲ್ಲಿ ರಬ್ಬರ್ ಶೀಟ್‌ಗಿಂತ ಹೆಚ್ಚಿನ ಬೆಲೆಗೆ ರಬ್ಬರ್ ಹಾಲು ಖರೀದಿಯಾಗಿತ್ತು. ಆದರೆ ನಾಲ್ಕೈದು ತಿಂಗಳ ಹಿಂದೆ 160 ರೂ. ಇದ್ದ 60 ಡಿಆರ್‌ಸಿ ಗುಣಮಟ್ಟದ ರಬ್ಬರ್ ಹಾಲಿಗೆ ಪ್ರಸ್ತುತ 100 ರೂ. ಕೂಡ ಸಿಗುತ್ತಿಲ್ಲ.