ದೇವಚಳ್ಳ ಗ್ರಾಮದ ತಳೂರು ಆಚಾರಿಕಾನ ಮನೆ ಎಂಬಲ್ಲಿನ ವ್ಯಕ್ತಿ ಪವನ್ ಕುಮಾರ್ ಬಾಡಿಗೆ ಮನೆ ಮಾಡಿಕೊಂಡಿರುವ ವಿವಾಹಿತ ಮಹಿಳೆಯೋರ್ವಳಿಗೆ ಮದುವೆಯಾಗುತ್ತೇನೆ ಎಂದು ನಂಬಿಸಿ ಬಳಿಕ , ಬಲಾತ್ಕಾರವಾಗಿ ಅತ್ಯಾಚಾರವನ್ನು ಎಸಗಿರುತ್ತಾನೆ ಎಂದು ಆರೋಪಿಸಿ, ನೊಂದ ಮಹಿಳೆಯು ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿಯವರಿಗೆ ದೂರು ನೀಡಿದ್ದರು. ಆರೋಪಿ ಪವನ್ ಕುಮಾರ್ ವಿರುದ್ಧ ನೀಡಿದ ದೂರಿನನ್ವಯ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪದಡಿ ಮೊಕದ್ದಮೆಯು ದಿನಾಂಕ 02/08/2022 ರಂದು ದಾಖಲಾಗಿತ್ತು. ಈ ಬಗ್ಗೆ ಮಾಹಿತಿ ದೊರೆತ ಆರೋಪಿಯು ನಿರೀಕ್ಷಣಾ ಜಾಮೀನು ಕೋರಿ ಮಂಗಳೂರಿನ 6 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದರು. ಆರೋಪಿ ಪರ ವಾದವನ್ನು ಆಲಿಸಿದ ನ್ಯಾಯಾಲಯದ ಗೌರವಾನ್ವಿತ ನ್ಯಾಯಧೀಶರಾದ ಕಾಂತರಾಜು ಎಸ್. ವಿ ರವರು ದಿನಾಂಕ 22/09/2022 ರಂದು ಆರೋಪಿಗೆ ಕೆಲವೊಂದು ಶರ್ತಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನನ್ನು ಮಂಜೂರು ಮಾಡಿರುವುದಾಗಿದೆ.ಆರೋಪಿಗಳ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಯಂ. ವೆಂಕಪ್ಪ ಗೌಡ,ಚಂಪಾ ವಿ. ಗೌಡ, ರಾಜೇಶ್ ಬಿ.ಜಿ., ಶ್ಯಾಮ್ ಪ್ರಸಾದ್ ಹಾಗೂ ಮನೋಜ್ ರವರು ವಕಾಲತ್ತು ವಹಿಸಿದ್ದರು .
- Saturday
- November 23rd, 2024