ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ತಾಲೂಕು ಘಟಕದ ನೂತನ ತಾಲೂಕು ಕಚೇರಿ ಉದ್ಘಾಟನೆ ಹಾಗೂ ಕೃಷಿ ಬದುಕು ಕುರಿತು ವಿಚಾರ ವಿನಿಮಯ ಕಾರ್ಯಕ್ರಮ ಅ.1ರಂದು ಬೆಳಗ್ಗೆ 10.30 ಕ್ಕೆ ಪೈಚಾರು ಬಸ್ ನಿಲ್ದಾಣದ ಬಳಿ ನಡೆಯಲಿದೆ.
ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕರು ಹಾಗೂ ಚಿಂತಕರಾದ ತೇಜಕುಮಾರ್ ಕುಡೆಕಲ್ಲು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಗೌಡ ಭೂತಕಲ್ಲು ವಹಿಸಲಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಪಾರಂಪರಿಕ ಕೃಷಿ ಹಾಗೂ ಆಧುನಿಕ ಕೃಷಿ ಕುರಿತು ವಿಚಾರ ಮಂಡನೆಯನ್ನು ಸಾಹಿತಿಗಳಾದ ಎ.ಕೆ ಹಿಮಕರ ನಡೆಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷ ಆಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಯುವ ರೈತ ಘಟಕದ ಜಿಲ್ಲಾಧ್ಯಕ್ಷ ಆದಿತ್ಯ ನಾರಾಯಣ ಕೊಲ್ಲಾಜೆ ಉಪಸ್ಥಿತರಿರುವರು.ಅತಿಥಿಗಳಾಗಿ ಜಿಲ್ಲಾ ಕಾರ್ಯದರ್ಶಿ ಡಿ.ಕೆ. ಶಾಹುಲ್ ಹಮೀದ್ , ಜಿಲ್ಲಾ ಯುವ ರೈತ ಘಟಕದ ಗೌರವಾಧ್ಯಕ್ಷ ಸುರೇಂದ್ರ ಕೋರ್ಯ, ಜಿಲ್ಲಾ ಉಪಾಧ್ಯಕ್ಷಾರದ ದಿವಾಕರ ಪೈ ಮಜಿಗುಂಡಿ, ಸುದರ್ಶನ್ ಕೊಯಿಂಗೋಡಿ, ಬಾಲಕೃಷ್ಣ ಪರಮಲೆ ಭಾಗವಹಿಸಲಿದ್ದಾರೆ ಎಂದು ತಾ.ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಕೆ. ತಿಳಿಸಿದ್ದಾರೆ.