ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು ಸುಳ್ಯ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಜಂಟಿ ಆಶ್ರಯದಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ಸೆ.28 ರಂದು ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆಹರೂ ಸ್ಮಾರಕ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಅನುರಾಧ ಕುರುಂಜಿ ನೆರವೇರಿಸಿದರು. ಅಧ್ಯಕ್ಷತೆಯನ್ನು ದ ಕ ಗೌಡ ವಿದ್ಯಾ ಸಂಘದ ನಿರ್ದೇಶಕರಾದ ಡಾ. ಸಾಯಿಗೀತಾ ವಹಿಸಿದ್ದರು.
ವೇದಿಕೆಯಲ್ಲಿ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಯ ಮುಖ್ಯಶಿಕ್ಷಕಿ, ಶ್ರೀ ಶಾರದಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜ್ಯೋತ್ಸ ಹಾಗೂ ರೆಡ್ ಕ್ರಾಸ್ ನ ಕೌನ್ಸಿಲರ್ ಗಣೀತಶಾಸ್ತ್ರ ಉಪನ್ಯಾಸಕರಾದ ಕು. ಕಾವ್ಯ ಉಪಸ್ಥಿತರಿದ್ದರು.
ನಂತರ ಅನುರಾಧ ಕುರುಂಜಿ ಅವರಿಂದ “ರೆಡ್ ಕ್ರಾಸ್ ಓರಿಯಂಟೇಷನ್ ಕಾರ್ಯಕ್ರಮ”ನೆರವೇರಿತು.
ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ದಯಾಮಣಿ ಪ್ರಸ್ತಾವನೆ ಗೈದರು. ವಿದ್ಯಾರ್ಥಿನಿಯರಾದ ತುಳಸಿ, ಅಮೂಲ್ಯ, ಚಿಂತನಾ ಪ್ರಾರ್ಥಿಸಿ, ಸ್ವಸ್ತಿಶ್ರೀ ಹಾಗೂ ಸಾತ್ವಿಕ ಕಾರ್ಯಕ್ರಮ ನಿರ್ವಹಣೆ ಮಾಡಿದರು. ರೆಡ್ ಕ್ರಾಸ್ ನ ವಿದ್ಯಾರ್ಥಿ ಪ್ರತಿನಿಧಿಗಳಾದ ಚೈತನ್ಯ ಸ್ವಾಗತಿಸಿ,ಪ್ರತೀಕ್ಷಾ ವಂದಿಸಿದರು.