ಸ್ವರ್ಣೋದ್ಯಮದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ವಿಶ್ವಶಾರ್ಹ ಸಂಸ್ಥೆಯಾಗಿರುವ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸುಳ್ಯ ಮಳಿಗೆಯು ದಶಮಾನೋತ್ಸವದ ಸಂಭ್ರಮದಲ್ಲಿದ್ದು, ಇದೀಗ ವಿಸ್ತಾರಗೊಂಡು ಚಿನ್ನ,ಬೆಳ್ಳಿ ಹಾಗೂ ವಜ್ರಾಭರಣಗಳಿಗೆ ಪ್ರತ್ಯೇಕ ವಿಭಾಗಗಳೊಂದಿಗೆ ರೂಪುಗೊಂಡು ಇಂದು ಶುಭಾರಂಭ ನಡೆಯಿತು.
ನವೀಕೃತ ವಿಸೃತ ಮಳಿಗೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನಿರ್ದೇಶಕರಾದ ಶ್ರೀಮತಿ ಶೋಭಾ ಚಿದಾನಂದ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆ ನಂಬಿಕೆಗೆ ಮತ್ತು ವಿಶ್ವಾಸಾರ್ಹತೆಗೆ ಹೆಸರು ವಾಸಿಯಾಗಿದೆ. ವಿಸ್ಕೃತ ಮಳಿಗೆಯೊಂದಿಗೆ ಸಂಸ್ಥೆಯು ಇನ್ನಷ್ಟೂ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಅತಿಥಿಗಳಾಗಿ ಆಗಮಿಸಿದ ಸುಳ್ಯದ ಪ್ರಸೂತಿ ತಜ್ಞೆ ಡಾ.ವೀಣಾ ಶುಭ ಹಾರೈಸಿದರು. ಶ್ರೀ ಹರಿ ಕಾಂಪ್ಲೆಕ್ಸ್ ನ ಪಾಲುದಾರರಾದ ನಳಿನಿ ಕಾಮತ್ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಗ್ರಾಹರಿಗೆ ಇನ್ನಷ್ಟು ಅನುಕೂಲವಾಗುವ ದೃಷ್ಟಿಯಿಂದ ವಿಸೃತ ಮಳಿಗೆ ಮಾಡಲಾಗಿದೆ.ಚಿನ್ನ,ಬೆಳ್ಳಿಯ ಜೊತೆ ವಜ್ರಾಭರಣವನ್ನೂ ಆರಂಭಿಸಲಾಗಿದೆ ಎಂದು ಹೇಳಿದರು .
ಸಂಸ್ಥೆಯ ಪಾಲುದಾರರಾದ ರಾಜೇಶ್ವರಿ ಬಲರಾಮ ಆಚಾರ್ಯ, ಲಕ್ಷ್ಮಿ ಕಾಂತ್ ಆಚಾರ್ಯ, ವೇದಾ ಲಕ್ಷ್ಮೀಕಾಂತ್ ಆಚಾರ್ಯ, ಸುಧನ್ವ ಆಚಾರ್ಯ ಉಪಸ್ಥಿತರಿದ್ದರು. ಶ್ರೀಹರಿ ಕಾಂಪ್ಲೆಕ್ಸ್ ನ ಪಾಲುದಾರರಾದ ಕೃಷ್ಣ ಕಾಮತ್,ಹರಿರಾಯ ಕಾಮತ್,ಹೇಮಂತ್ ಕಾಮತ್ ಹಾಗೂ ಜಿ.ಎಲ್.ಸಂಸ್ಥೆಯ ಸಿಬ್ಬಂದಿಗಳು,ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ವಿನಯ್ ಕೇರ್ಪಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.