ಶೌರ್ಯ ಯುವತಿ ಮಂಡಲ (ರಿ) ಪೈಲಾರು ಇದರ ವಾರ್ಷಿಕ ಮಹಾಸಭೆ ಕಾರ್ಯಮವು ಸೆ.25 ರಂದು ಮಿತ್ರವೃಂದ ಕಟ್ಟಡ ಪೈಲಾರು ಇಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವತಿ ಮಂಡಲದ ಅಧ್ಯಕ್ಷೆ ಕು. ಚರಿಷ್ಮಾ ಕಡಪಳ ವಹಿಸಿದ್ದರು.
ಶ್ರೀಮತಿ ಕುಸುಮಾವತಿ ಕೋಡ್ತುಗುಳಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ತೇಜಸ್ವಿ ಕಡಪಳ ಉಪಸ್ಥಿತರಿದ್ದರು.
ಶೌರ್ಯ ಯುವತಿ ಮಂಡಲದ 2022-23ರ ನೂತನ ಸಮಿತಿ ರಚನೆಯಾಗಿದ್ದು,ಅಧ್ಯಕ್ಷೆಯಾಗಿ ಕು. ಚರಿಷ್ಮಾ ಕಡಪಳ ಪುನರಾಯ್ಕೆಗೊಂಡಿದ್ದು, ಕಾರ್ಯದರ್ಶಿಯಾಗಿ ಕು. ಹಸ್ತವಿ ಮಡಪ್ಪಾಡಿ, ಕೋಶಾಧಿಕಾರಿಯಾಗಿ ಶ್ರೀಮತಿ ರಶ್ಮಿ ರಜನಿಕಾಂತ್ ಉಮ್ಮಾಡ್ಕ, ಉಪಾಧ್ಯಕ್ಷೆಯಾಗಿ ಶ್ರೀಮತಿ ರಾಜೀವಿ ಗೋಳ್ಯಡಿ, ಜತೆ ಕಾರ್ಯದರ್ಶಿಯಾಗಿ ಕು. ಜಯಶ್ರೀ ಕುಳ್ಳಂಪಾಡಿ ಆಯ್ಕೆಗೊಂಡಿರುತ್ತಾರೆ.
ನಿರ್ದೇಶಕರಾಗಿ, ಶ್ರೀಮತಿ ಭವ್ಯ ಕಿರಣ್ ನಾಯಾರ್ಕಲ್ಲು, ಶ್ರೀಮತಿ ಕಮಲಾಕ್ಷಿ ಗುಡ್ಡೆಮನೆ, ಶ್ರೀಮತಿ ಶ್ವೇತಾನಾಯಾರ್ಕಲ್ಲು, ಶ್ರೀಮತಿ ಚೈತ್ರಾ ಕಡಪಳ, ಕು. ಜ್ಯೋತಿ ಕಡಪಳ,ಕು. ಪ್ರಜ್ಞಾ ಮಾಡಬಾಕಿಲು, ಕು. ಸುಷ್ಮತಾ ಕಡಪಳ, ಕು. ಸೌಂದರ್ಯ ಕಡಪಳ, ಕು. ದಿಶಾ ಮಾಡಬಾಕಿಲು, ಕು. ಅನುಜ್ಞಾಸಂಕೇಶ ಮತ್ತು ಗೌರವ ಸಲಹೆಗಾರರಾಗಿ ಶ್ರೀಮತಿ ಮನೋರಮಾ ಕಡಪಳ, ಶ್ರೀಮತಿ ಕುಸುಮಾವತಿ ಕೊಡ್ತುಗುಳಿ, ಶ್ರೀಮತಿ ಭವಾನಿ ಮೊಂಟಡ್ಕ ರವರನ್ನು ಆಯ್ಕೆಮಾಡಲಾಯಿತು.
ಕಾರ್ಯಕ್ರಮದಲ್ಲಿ ಕುಮಾರಿ ಅನುಜ್ಞಾ ಸಂಕೇಶರವರು ಪ್ರಾರ್ಥಿಸಿ, ಜಯಶ್ರೀ ಕುಳ್ಳಂಪಾಡಿ ಸ್ವಾಗತಿಸಿದರು. ಹಸ್ತವಿ ಮಡಪ್ಪಾಡಿ ವಾರ್ಷಿಕ ವರದಿ ಮಂಡಿಸಿದರು. ಸೌಂದರ್ಯ ಕಡಪಳ ವಂದಿಸಿ, ರಶ್ಮಿರಜನಿಕಾಂತ್ ಉಮ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.