Ad Widget

ಗುತ್ತಿಗಾರು : ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಜನ ಜಾಗೃತಿ ವೇದಿಕೆ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಗುತ್ತಿಗಾರಿನ ಸರಕಾರಿ ಪದವಿಪೂರ್ವ ಕಾಲೇಜ್ ನಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕತೆಯನ್ನು ಪ್ರಾಂಶುಪಾಲಾರದ ಶ್ರೀಮತಿ ಚೆನ್ನಮ್ಮರವರು ವಹಿಸಿದರು.

. . . . . . .

ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀ ವಿಜಯ್ ಕುಮಾರ್ ಚಾರ್ಮತ ನಡುಗಲ್ಲುರವರು ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿ, ವಿದ್ಯಾರ್ಥಿಗಳಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿ ಹಾಗೂ ಸದಾಚಾರಗಳ ಬಗ್ಗೆ ಅರಿವು ಮೂಡಿಸಿವ ಕೆಲಸ ಆಗಬೇಕು. ದೇಶವನ್ನು ಕಟ್ಟುವ ಕೆಲಸ ನಮ್ಮಿಂದ ಆಗಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿರವರಾದ ಬಾಬು ಮಾಸ್ತರ್ ಅಚ್ರಪ್ಪಾಡಿರವರು ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಕಲ್ಪನೆ, ಉದ್ದೇಶ, ವಿದ್ಯಾರ್ಥಿ ಜೀವನದಲ್ಲಿ ದಾರಿ ತಪ್ಪುವ ಕಾರಣ ಮತ್ತು ಘಟನಾವಳಿಗಳ ಬಗ್ಗೆ, ಸಮಸ್ಯೆ ಮತ್ತು ವ್ಯಸನಗಳಿಗೆ ಕಾರಣಗಳ ಬಗ್ಗೆ, ಇದಕ್ಕೆ ಪರಿಹಾರ -ಜೀವನ ಕೌಶಲ್ಯ ಬಗ್ಗೆ ತರಭೇತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯವರಿಗೆ ಸ್ವಾಸ್ಥ್ಯ ಸಂಕಲ್ಪ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಪ್ರೌಢ ಶಾಲಾ ವಿಭಾಗದ ಮುಖ್ಯ ಗುರುಗಳಾದ ನೆಲ್ಸನ್ ಡಿ ಕ್ಯಾಸ್ವಿಲಿನೋರವರು, ಪದವಿಪೂರ್ವ ಕಾಲೇಜ್ ನ ಎಸ್ ಡಿ ಎಂ ಸಿ ಸಮಿತಿಯ ಕಾರ್ಯಧ್ಯಕ್ಷರಾದ ಲೋಕೇಶ್ವರ್ ಡಿ ಆರ್ ರವರು, ಶಿಕ್ಷಕರಾದ ಸುನೀಲ್ ರವರು ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಗೌಡ ಕೆ ರವರು ಸ್ವಾಗತಿಸಿ, ಶಿಕ್ಷಕಿರವರಾದ ಕುಮಾರಿ ಅಶ್ವಿನಿರವರು ಧನ್ಯವಾದವಿತ್ತರು. ಸಹ ಶಿಕ್ಷಕಿರವರಾದ ಶ್ರೀಮತಿ ಕವಿತಾ ಎಂ ರವರು ಕಾರ್ಯನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!