Ad Widget

ಗುತ್ತಿಗಾರು: ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಗುತ್ತಿಗಾರು ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಸುಬ್ರಮಣ್ಯ , ಇನ್ನರ್ ವೀಲ್ ಕ್ಲಬ್ ಸುಬ್ರಮಣ್ಯ, ಆಯುರ್ವೇದ ಮೆಡಿಕಲ್ ಕಾಲೇಜ್ ಕೆವಿಜಿ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪೌಷ್ಟಿಕ ಆಹಾರ ಸಪ್ತಾಹ , ಪೋಷಣ್ ಅಭಿಯಾನ ಮಾಸಾಚರಣೆ, ಶಿಶು ಪ್ರದರ್ಶನ,ಕಿಶೋರಿಯರ ಒಲೆ ರಹಿತ ಅಡುಗೆ ತಯಾರಿ ಹಾಗೂ ಪೌಷ್ಟಿಕ ಆಹಾರ ತಯಾರಿ ಕಾರ್ಯಕ್ರಮವನ್ನು ಪ.ವರ್ಗದ ಸಭಾಭವನದಲ್ಲಿ ಮಾನ್ಯ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಉಪ ನಿರ್ದೇಶಕರಾದ ಶ್ರೀ ಪಾಪ ಬೋವಿ ಉದ್ಘಾಟಿಸಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು.

. . . . . . .

ವಿವಿಧ ಅಂಗನವಾಡಿ ಕೇಂದ್ರದ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಇನ್ನರ್ ವೀಲ್ ಕ್ಲಬ್ ಸುಬ್ರಹ್ಮಣ್ಯ ಅಧ್ಯಕ್ಷರು ಸರೋಜಾ ಮಾಯಿಲಪ್ಪ ಸಂಕೇಶ್ವರ ಪೌಷ್ಟಿಕ ಆಹಾರದ ಕಿಟ್ವನ್ನು ಕೊಡುಗೆಯಾಗಿ ನೀಡಿದರುಶಿಶು ಪ್ರದರ್ಶನ ಮತ್ತು ಒಲೆ ರಹಿತ ಅಡುಗೆ ಮಾಡಿದ ಕಿಶೋರಿಯರಿಗೆ ಇಲಾಖೆ ವತಿಯಿಂದ ಬಹುಮಾನ ವಿತರಿಸಲಾಯಿತು.ಪೌಷ್ಟಿಕ ಆಹಾರ ತಯಾರಿ ನಡೆಸಿದ ಮಾತೆಯರಿಗೆ ಪಂಚಾಯತ್ ಸದಸ್ಯರಾದ ವಿಜಯಕುಮಾರ್ ಚಾರ್ಮತರವರು ಪ್ರೋತ್ಸಾಹಕ ಬಹುಮಾನ ನೀಡಿದರು.

ಈ ಸಂದರ್ಭದಲ್ಲಿ ಜನಮೆಚ್ಚಿದ ಅಧಿಕಾರಿ ಸಿಡಿಪಿಓ ರಶ್ಮಿ ಮೇಡಂ ಹಾಗೂ ಅಪಘಾತ ರಹಿತ ಚಾಲಕರಾದ ಯೋಗೀಶ್ ಸರ್ ಅವರನ್ನು ಸನ್ಮಾನಿಸಲಾಯಿತುಸಭಾಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಶ್ರೀಮತಿ ರೇವತಿ ಆಚಳ್ಳಿ ವಹಿಸಿದ್ದರು. ಆಯುರ್ವೇದ ಮೆಡಿಕಲ್ ಕಾಲೇಜ್ ಕೆವಿಜಿ ಸುಳ್ಯ ಇಲ್ಲಿನ ಡಾ. ಅವಿನಾಶ್ ಭಟ್ ಸಿರಿಧಾನ್ಯಗಳ ಬಗ್ಗೆ ಮಾಹಿತಿ ನೀಡಿದರು.

ರೋಟರಿ ಕ್ಲಬ್ ಸುಬ್ರಹ್ಮಣ್ಯ ಅಧ್ಯಕ್ಷರಾದ ಗೋಪಾಲ ಎಣ್ಣೆಮಜಲು ಕಾರ್ಯದರ್ಶಿ ರವಿ ಕಕ್ಕೆಪದವು, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ನಂದಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಜ್ಯೋತಿ ಮೋಳ್, ಪಂಚಾಯತ್ ಹಿರಿಯ ಸದಸ್ಯರಾದ ವೆಂಕಟ್ ವಳಲಂಬೆ, ಪಿಡಿಓ ಧನಪತಿ, ಉಪಾಧ್ಯಕ್ಷರು ಸರ್ವ ಸದಸ್ಯರು ,ಅಮರ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ದಿವ್ಯ ಸೃಜನ್ ಗುಡ್ಡೆಮನೆ, ವಲಯ ಮೇಲ್ವಿಚಾರಕಿ ಉಷಾ ಮೇಡಂ, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಲತಾಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ತೇಜಕುಮಾರಿ ಸ್ವಾಗತಿಸಿ ಲತಾ ಅಂಬೆಕಲ್ಲು ಧನ್ಯವಾದ ಸಮರ್ಪಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಅಭಿಲಾಷ ಮತ್ತು ಅಂಗನವಾಡಿ ಕಾರ್ಯಕರ್ತೆ ನಿವೇದಿತ ಕಾರ್ಯಕ್ರಮ ನಿರೂಪಿಸಿದರು.

ಗ್ರಾಮ್ ಪಂಚಾಯತ್ ಮಟ್ಟದ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಆಶಾ ಕಾರ್ಯಕರ್ತೆಯರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು, ಎಲ್ಲಾ ಸಂಘ ಸಂಸ್ಥೆಗಳ ಸದಸ್ಯರು, ಬಾಲವಿಕಾಸ ಸಮಿತಿಯವರು, ಶೌರ್ಯ ವಿಪತ್ತು ತಂಡದ ಸದಸ್ಯರು , ಪಂಚಾಯತ್ ಸಿಬ್ಬಂದಿ ಹಾಗೂ ಸ್ಚಚ್ಛಾತಾ ಸಿಬ್ಬಂದಿ ಹಾಗೂ ಹಿತೈಷಿಗಳು ಪಾಲ್ಗೊಂಡಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!