ಅಜ್ಜಾವರ ಗ್ರಾಮದ ಕಾಂತಮಂಗಲ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿದ್ದ ದಿ.ಬಿ.ಕೆ.ಶಾರದಾಬಾಯಿ ನಾವಡರವರ ಸ್ಮರಣಾರ್ಥ ಅವರ ಪತಿ ಕೃಷ್ಣ ನಾವಡರು ಹಾಗೂ ಮಕ್ಕಳು ಕೊಡುಗೆಯಾಗಿ ನೀಡಿದ ನಲಿಕಲಿ ಕೊಠಡಿಯ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಸ್ವಾಮೀಜಿಯವರು ಕಾರ್ಯಕ್ರಮ ಆಶೀರ್ವಚನ ನುಡಿಗಳಲ್ಲಿ ದೇಶ ಭಕ್ತಿಯು ಎಳೆಯವಯಸ್ಸಿನಲ್ಲಿ ಕಲಿಸಬೇಕು ಇದೀಗ ಕಲಿತವರೇ ದೇಶದ್ರೋಹದ ಕೆಲಸಗಳನ್ನು ಮಾಡುತ್ತಿರುವುದು ಈ ನಿಟ್ಟಿನಲ್ಲಿ ದೇಶಭಕ್ತಿಯ ಬಗ್ಗೆ ತಿಳಿಸಿಕೊಡಬೇಕು ಮತ್ತು ದೇಶ ಭಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಸಭಾ ಕಾರ್ಯಕ್ರಮ ವನ್ನು ಸಚಿವ ಎಸ್.ಅಂಗಾರ ಉದ್ಘಾಟಿಸಿದರು.
ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಬಸವನಪಾದೆ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಕರ್ನಾಟಕ ಬ್ಯಾಂಕ್ ಚೀಫ್ ಬಿಸಿನೆಸ್ ಆಫೀಸರ್ ಗೋಕುಲ್ ದಾಸ್ ಪೈ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹಾದೇವ, ಶಿಕ್ಷಣ ಸಂಯೋಜಕರಾದ ಚಂದ್ರಶೇಖರ, ಶ್ರೀಮತಿ ನಳಿನಿ, ಸಮೂಹ ಸಂಪನ್ಮೂಲ ವ್ಯಕ್ತಿ ಭವಾನಿಶಂಕರ್ ಕೆ, ಕರ್ನಾಟಕ ಬ್ಯಾಂಕ್ ನ ನಿವೃತ್ತ ಎ.ಜಿ.ಎಂ. ವೆಂಕಟ್ರಾಜ್, ನಿವೃತ್ತ ಶಿಕ್ಷಣಾಧಿಕಾರಿ ಕಮಲಾಕರ ಹಾಲಂಬಿ, ವಿಶ್ರಾಂತ ಕೃಷಿ ಅಧಿಕಾರಿ ಪಿ.ಸುಬ್ಬರಾವ್, ಶ್ರೀಮತಿ ಸುಮಾ ಸುಬ್ಬರಾವ್ ದೊಡ್ಡತೋಟ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮಂಜುಳಾ, ಶ್ರೀಮತಿ ನಾರಾಯಣಿ ಕಲ್ಲೂರಾಯ ಕಾಂತಾಜೆ ಕಾಂತಮಂಗಲ, ಬೃಂದಾವನ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎನ್. ಶ್ರೀಕೃಷ್ಣ ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲಕೃಷ್ಣ, ನಿವೃತ್ತ ಪ್ರಾಂಶುಪಾಲ ಜಿ. ಉಮ್ಮರ್, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ವೇದಿಕೆಯಲ್ಲಿ ಇದ್ದರು.
ವೇದಿಕೆಯಲ್ಲಿ ಸಚಿವರಿಗೆ ಅಹವಾಲು ಸಲ್ಲಿಕೆ
ಕಾಂತಮಂಗಲ ಶಾಲೆಯಲ್ಲಿ ಶೌಚಾಲಯದ ವ್ಯವಸ್ಥೆಯು ಭಹಳ ದುಸ್ಥಿತಿಯಲ್ಲಿದೆ ಅದನ್ನು ಕೂಡಲೆ ಸರಿಪಡಿಸಿ ನೀಡಲು ಸಚಿವರಿಗೆ ಶಾಲಾ ಶಿಕ್ಷಕರು ಮನವಿ ಸಲ್ಲಿಸಿದರು ಈ ಸಂಧರ್ಭದಲ್ಲಿ ಸಚಿವರು ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಈ ವಿಚಾರದ ಕುರಿತು ವೇದಿಕೆಯಲ್ಲಿ ಪ್ರಶ್ನಿಸಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿ ಕಾರ್ಯಕ್ರಮದಿಂದ ತೆರಳಿದರು .
- Tuesday
- December 3rd, 2024