ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಅಜ್ಜಾವರ ವಲಯದ ವಲಯ ಸಮಿತಿಯನ್ನು ಅಜ್ಜಾವರ ವಲಯ ಕಚೇರಿಯಲ್ಲಿ ನಡೆದ ಒಕ್ಕೂಟದ ಅಧ್ಯಕ್ಷರುಗಳ ಸಭೆಯಲ್ಲಿ ರಚಿಸಲಾಯಿತು.
ಅಜ್ಜಾವರ ವಲಯದ ನೂತನ ಅಧ್ಯಕ್ಷರಾಗಿ ಸುರೇಶ್ ಕಣೆಮರಡ್ಕ, ಕಾರ್ಯದರ್ಶಿ ವಲಯ ಮೇಲ್ವಿಚಾರಕರಾದ ಶ್ರೀಮತಿ ವಿಶಾಲ, ಉಪಾಧ್ಯಕ್ಷರಾಗಿ ಸುಧೀರ್ ಕಾಂತಮಂಗಲ ಕೋಶಾಧಿಕಾರಿಯಾಗಿ ಪ್ರವೀಣ್ ಕುಮಾರ್, ಉದ್ದಂತಡ್ಕ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಹರಿಣಾಕ್ಷಿ ರೈ ಮೇನಾಲ ಆಯ್ಕೆಯಾದರು.
ಈ ಸಭೆಯಲ್ಲಿ ಸುಳ್ಯ ವಲಯದ ಯೋಜನಾಧಿಕಾರಿಗಳಾದ ನಾಗೇಶ್ ಭಾಗವಹಿಸಿ ಮಾಹಿತಿ ನೀಡಿದರು.
ಸಭೆಯಲ್ಲಿ ಅಜ್ಜಾವರ ವಲಯದ ಸೇವಾನಿರತರು ಉಪಸ್ಥಿತರಿದ್ದರು.