
ಲಾಕ್ ಡೌನ್ ಪ್ರಯುಕ್ತ ನಿಲ್ಲಿಸಿದ್ದ ಸಾಮೂಹಿಕ ಪ್ರಾರ್ಥನೆ ಪುನರಾರಂಭಿಸಲು ಸರ್ಕಾರ ನಿರ್ಬಂಧಗಳನ್ನು ತೆರವು ಗೊಳಿಸಿ ಆಜ್ಞೆ ಹೊರಡಿಸಿದ ಹಿನ್ನೆಲೆಯಲ್ಲಿ ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷ ಬಹು. ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತು ಕೋಯ ತಂಙಳ್ ಹಾಗೂ ಇಂಡಿಯನ್ ಗ್ರಾಂಡ್ ಮುಫ್ತಿ ಎ.ಪಿ.ಉಸ್ತಾದರ ಮಾರ್ಗದರ್ಶನ ಹಾಗೂ ಉಭಯ ಜಿಲ್ಲೆಗಳ ಖಾಝಿಗಳ ಸೂಚನೆ ಮತ್ತು ಸರಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು ಶುಕ್ರವಾರದ ನಮಾಜನ್ನು ನಿರ್ವಹಿಸಲಾಯಿತು. ಬೆಳ್ಳಾರೆ ಝಕರಿಯ ಜುಮಾ ಮಸ್ಜಿದ್ ನ ಖತೀಬರಾದ ಯೂನುಸ್ ಸಖಾಫಿ ವಯನಾಡ್ ರವರುಗಳ ನಿರ್ದೇಶನ ಪ್ರಕಾರ ಜಮಾಅತ್ ಅಧ್ಯಕ್ಷ ಕೆ.ಎಂ ಮುಹಮ್ಮದ್ ಹಾಜಿ ಯವರ ಅನುಮತಿ ಮೇರೆಗೆ ಜೂ.8ರಂದು ಮಸೀದಿಯಲ್ಲಿ ಸಾಮೂಹಿಕ ನಮಾಜ್ ಪ್ರಾರಂಭಗೊಂಡು
ಜೂ.12 ರಂದು ಶುಕ್ರವಾರ ಜುಮ್ಅ ನಮಾಝ್ ನೆರವೇರಿತು. ಸರ್ಕಾರ ಮತ್ತು ಜಮಾಅತಿನ ನಿಯಮಗಳನ್ನು ಪಾಲಿಸಿಕೊಂಡು ಪ್ರಾರ್ಥನೆಗಳಲ್ಲಿ ಸ್ಥಳೀಯ ಮುಸಲ್ಮಾನ ಬಾಂಧವರು ಭಾಗವಹಿಸಿದರು.