ನರೇಂದ್ರ ಮೋದಿ ಅಭಿಮಾನಿ ಬಳಗ ಕೇನ್ಯ ಮತ್ತು ಸೇವಾ ಭಾರತಿ ಪಂಜ ವಲಯದ ವತಿಯಿಂದ ರೆಡ್ ಕ್ರಾಸ್ ಸೊಸೈಟಿ ಮಂಗಳೂರು. ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ನರೇಂದ್ರ ಮೋದಿಜಿಯವರ 72ನೇ ಜನ್ಮದಿನದ ಪ್ರಯುಕ್ತ ಸೆ.18 ರಂದು ಕೇನ್ಯ ಶಾಲಾ ವಠಾರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಚಾಲಕರಾದ ಚಂದ್ರಶೇಖರ ತಳೂರು ಅವರು ಮಾಡಿದರು.
ಅಧ್ಯಕ್ಷತೆಯನ್ನು ವಿನ್ಯಾಸ್ ರೈ ಕೇನ್ಯ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಕಾಸರಗೋಡು ಮುನ್ಸಿಪಾಲ್ ಕೌನ್ಸಿಲರ್ ರಮೇಶ್, ರೆಡ್ ಕ್ರಾಸ್ ಮಂಗಳೂರಿನ ಜಿಲ್ಲಾ ಶಿಬಿರ ಸಂಯೋಜಕ ಪ್ರವೀಣ್ ಕುಮಾರ್, ಹಿಂ.ಜಾ.ವೇ ಕೇನ್ಯ ಅಧ್ಯಕ್ಷರಾದ ಪದ್ಮನಾಭ ಕೆರೆಕ್ಕೋಡಿ, ಕೇನ್ಯ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪುಟ್ಟಣ್ಣ ಕುಂಜತ್ತಾಡಿ, ಸದಾ ಸಿದ್ಧಿ ಮಿತ್ರ ಬಳಗ ಬೀದಿಗುಡ್ಡೆ ಅಧ್ಯಕ್ಷರಾದ ದೀಕ್ಷಿತ್ ಪೆರಿಯಡ್ಕ, ಆರಾಧನಾ ಸಮಿತಿ ಪೇರಳಕಟ್ಟೆ ಅಧ್ಯಕ್ಷರಾದ ಯುವರಾಜ್ ಕಣ್ಕಲ್, ಹಿಂ.ಜಾ.ವೇ ಪಂಜ ಅಧ್ಯಕ್ಷರಾದ ಕಿರಣ್ ನೆಕ್ಕಿಲ, ವಿಕ್ರಮ ಯುವಕ ಮಂಡಲ ಬಳ್ಪ ಇದರ ಅಧ್ಯಕ್ಷರಾದ ಶಶಿಧರ್ ಪಾನ, ಸಿದ್ಧಿ ವಿನಾಯಕ ಸ್ಪೋರ್ಟ್ಸ್ ಕ್ಲಬ್ ಬೀದಿಗುಡ್ಡೆ ಇದರ ಅಧ್ಯಕ್ಷ ವಿಜಯಕುಮಾರ್ ಕಾಂಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೃಜನ್ ರೈ ನೆರ್ಪು ಸ್ವಾಗತಿಸಿ ಪ್ರವೀಣ್ ಗೆಜ್ಜೆ ವಂದಿಸಿದರು. ಶಿಬಿರದಲ್ಲಿ ಒಟ್ಟು 130 ಜನ ರಕ್ತದಾನ ಮಾಡಿ ಪ್ರಶಂಸೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕೇನ್ಯದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇವತಿ ಕೊಡಪಾಡಿ ಯವರನ್ನು ಸನ್ಮಾನಿಸಲಾಯಿತು.