ಸುಳ್ಯ ತಾಲೂಕು ಕೊಲ್ಲಮೊಗರು ಗ್ರಾಮದ ಕಡಂಬಳ ಎಂಬಲ್ಲಿ ತೀವ್ರ ಮಳೆಗೆ ಕೊಚ್ಚಿ ಹೋಗಿರುವ ಸೇತುವೆಯನ್ನು ಕೆಪಿಸಿಸಿ ಸದಸ್ಯ ನಂದಕುಮಾರ್ ಹೆಚ್ಎಂ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು .
ಈ ಸಂದರ್ಭದಲ್ಲಿ ಸ್ಥಳೀಯ ನಾಗರಿಕರು ಸಂಪರ್ಕ ಕಡಿತಗೊಂಡಿರುವ ಬಗ್ಗೆ ನಂದಕುಮಾರ್ ಅವರ ಗಮನ ಸೆಳೆದಾಗ ತಕ್ಷಣ ತಮ್ಮ ವೈಯಕ್ತಿಕ ದೇಣಿಗೆಯಿಂದ ಸೇತುವೆಯನ್ನು ಪುನರ್ ನಿರ್ಮಾಣ ಮಾಡುವ ಭರವಸೆ ನೀಡಿ, ತಕ್ಷಣ ಕೆಲಸ ಪ್ರಾರಂಭಿಸುವಂತೆ ಸೂಚನೆ ನೀಡಿದರು. ಮಳೆ ಹಾನಿಯಿಂದಾಗಿ ಕೊಚ್ಚಿಹೋಗಿರುವ ಸೇತುವೆಯನ್ನು ದುರಸ್ತಿ ಪಡಿಸಲು ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಜನಪ್ರತಿನಿಧಿಗಳು ಸ್ಪಂದಿಸದೆ ಇದ್ದಂತಹ ಸಂದರ್ಭದಲ್ಲಿ ಕೊಲ್ಲಮೊಗರು ಭಾಗದ ಗ್ರಾಮೀಣ ಪ್ರದೇಶದ ಜನತೆಯ ಬೇಡಿಕೆಗೆ ತಕ್ಷಣ ಸ್ಪಂದಿಸಿ ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸಲು ಸೂಚಿಸಿ ತಮ್ಮ ಸೇವಾ ಮನೋಭಾವನೆಯನ್ನು ಕಾರ್ಯರೂಪಕ್ಕೆ ತರಲು ಸ್ಪಂದಿಸಿದ ನಂದಕುಮಾರ್ ಅವರ ಬಗ್ಗೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದರು.
ಸೇತುವೆ ವೀಕ್ಷಣೆಯ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ, ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ.ಜೆ., ವಿಜೇಶ್ ಹಿರಿಯಡ್ಕ ಹರ್ಷಕುಮಾರ್, ಚೆನ್ನಕೇಶವ ಕೊಲ್ಲಮೊಗ್ರ, ಕಮಲಾಕ್ಷ ಕೊಲ್ಲಮೊಗ್ರ, ಹಾಗೂ ಸ್ಥಳಿಯ ನಿವಾಸಿಗಳು ಉಪಸ್ಥಿತರಿದ್ದರು.