Ad Widget

ಪೆರಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಪೆರಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸೆ.20ರಂದು ನಡೆಯಿತು.

. . . . . .

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಬಿ.ಹೊನ್ನಪ್ಪರವರು ವಹಿಸಿದ್ದರು. 2021_2022ರ ವರದಿಯನ್ನು ನಿರ್ದೇಶಕ ಚಂದ್ರಶೇಖರ.ಪಿ.ಹೆಚ್. ವಾಚಿಸಿದರು.ಕಳೆದ ವಾರ್ಷಿಕ ಸಭೆಯ ವರದಿಯನ್ನು ನಿರ್ದೇಶಕ ವಿಷ್ಣುಪ್ರಸಾದ್ ರವರು ಓದಿದರು. ಕಾರ್ಯನಿರ್ವಾಹಣಾಧಿಕಾರಿ ಇಂದಿರಾ.ಕೆ.ಎಸ್. ಸಭೆಯ ನೋಟಿಸ್ ಓದಿದರು.

ಈ ಸಂದರ್ಭದಲ್ಲಿ ಹಾಲಿನ ಡೈರಿಗೆ ಅತಿ ಹೆಚ್ಚು ಹಾಲು ಹಾಕಿರುವವರಲ್ಲಿ ಯಶೋಧ.ಕೆ. ಪ್ರಥಮ, ವಿಷ್ಣುಪ್ರಸಾದ್ ದ್ವಿತೀಯ, ಡಿ.ಡಿ.ಸುಷ್ಮಾ ತೃತೀಯ ಬಹುಮಾನ ಪಡೆದರು.

1.08ಲಕ್ಷ ನಿವ್ವಳ ಲಾಭ ಸಂಘಕ್ಕೆ 2021_2022ರಲ್ಲಿ ಬಂದಿರುತದೆ. ಡಿವಿಡೆಂಡ್ ಸದಸ್ಯರಿಗೆ ಲೀಟರ್ ಗೆ 0.50 ಪೈಸೆಯಂತೆ ಬೋನಸ್ ನೀಡಲಾಗಿದೆ.

ನಿರ್ದೇಶಕಿ ಡಿ.ಡಿ.ಸುಷ್ಮಾ. ಪ್ರಾರ್ಥಿಸಿ, ಉಪಾಧ್ಯಕ್ಷರು ಉಪೇಂದ್ರ.ಕೆ.ಜೆ. ಸ್ವಾಗತಿಸಿದರು.ಕೆ.ವಿ.ರಾಜೇಶ ನಿರ್ದೇಶಕರು ವಂದಿಸಿ, ಸಂಘದ ಅಧ್ಯಕ್ಷರಾದ ಕೆ.ಬಿ.ಹೊನ್ನಪ್ಪರವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!