ಐವರ್ನಾಡು ಗ್ರಾಮದಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಪ್ರಾರಂಭವಾಗಿದ್ದು ಅದನ್ನು ಮೀನುಗಾರಿಕೆ ಬಂದರು ಒಳನಾಡು ಸಾರಿಗೆ ಸಚಿವ ಎಸ್ ಅಂಗಾರರವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ ಕೆ., ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀನಿವಾಸ ಮಡ್ತಿಲ, ಐವರ್ನಾಡು ಮಡ್ತಿಲ ಕಾಂಪ್ಲೆಕ್ಸ್ ಮಾಲಕ ಸತೀಶ್, ಕೃಪಾ ಕಾಂಪ್ಲೆಕ್ಸ್ ಮಾಲಕ ಕೃಷ್ಣಪ್ಪ ಗೌಡ ನೆಕ್ರೆಪ್ಪಾಡಿ, ದೀಪಾ ಸರವಣ ಬೇಂಗಮಲೆ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.