ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಸುಳ್ಯದ ಪ್ರಸೂತಿ ಮತ್ತು ಸ್ತ್ರೀರೋಗ ಹಾಗೂ ಮಕ್ಕಳ ವಿಭಾಗದಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣೆ ಮತ್ತು ಸಲಹಾ ಶಿಬಿರವನ್ನು ದಿನಾಂಕ 26.09.2022 ರಿಂದ 30.09.2022 ರ ವರೆಗೆ ಸುಳ್ಯದ ಅಂಬಟೆ ಅಡ್ಕದಲ್ಲಿರುವ ಕೆ.ವಿ.ಜಿ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದಿಂದ ಸ್ತ್ರೀಯರ ಆರೋಗ್ಯ ಸಮಸ್ಯೆಗಳಾದ ಮುಟ್ಟಿನ ಸಮಸ್ಯೆಗಳು, ಬಿಳಿಸೆರಗು, ಬಂಜೆತನ, ಗರ್ಭಕೋಶ ಜಾರುವಿಕೆ, PCOD, ಗರ್ಭಿಣಿ ಪರಿಚರ್ಯ, ಸೂತಿಕಾ ಉಪಚಾರ ಮತ್ತು ಚಿಕಿತ್ಸಾ ವಿಭಾಗದಿಂದ ಮಕ್ಕಳ ಆರೋಗ್ಯ ಸಮಸ್ಯೆಗಳಾದ ಮಕ್ಕಳಲ್ಲಿ ನಿಧಾನಗತಿಯ ಬೆಳವಣಿಗೆ(Delayed milestones), ಅಸಹಜ ಮೆದುಳಿನ ಬೆಳವಣಿಗೆ(Cerebral palsy), ವಿಶೇಷ ಚೇತನ ಮಕ್ಕಳು(Specially abled children), ನಿಧಾನಕಲಿಕೆ, ಅಪೋಷಣೆ, ಅಸಹಜ ನಡವಳಿಕೆ(Behavioural disorders), ಪದೇ ಪದೇ ತಲೆದೋರುವ ಶ್ವಾಸಕೋಶ, ಉದರ ಮತ್ತು ಚರ್ಮ ಸಂಬಂಧಿ ಸಮಸ್ಯೆಗಳಿಗೆ ಉಚಿತ ತಪಾಸಣೆ ಮತ್ತು ಸಲಹೆಯನ್ನು ನೀಡಲಾಗುವುದು.
ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ., ತಿಳಿಸಿರುತ್ತಾರೆ.