Ad Widget

ಸುಬ್ರಹ್ಮಣ್ಯ-ಐನೆಕಿದು ಪ್ರಾ.ಕೃ.ಪ.ಸ ಸಂಘದ ವಾರ್ಷಿಕ ಮಹಾಸಭೆ

22.76 ಲಕ್ಷ ಲಾಭಾಂಶ

. . . . . .

07% ಡಿವಿಡೆಂಡ್ ಘೋಷಣೆ

ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2021-22 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.18 ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಭಾಭವನ ಸುಬ್ರಹ್ಮಣ್ಯ ಇಲ್ಲಿ ಜರುಗಿತು. ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. 2021-22ನೇ ಸಾಲಿನಲ್ಲಿ ಸಂಘವು 102.60 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, ಪ್ರಸಕ್ತ ಸಾಲಿನಲ್ಲಿ 22.76 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ.

ಶೇರುದಾರರಿಗೆ ಶೇ.07 ದರದಲ್ಲಿ ಡಿವಿಡೆಂಡ್ ನೀಡಲು ತೀರ್ಮಾನಿಸಲಾಯಿತು. ವಾರ್ಷಿಕ ಮಹಾಸಭೆಯ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಕಾಶ್.ಕೆ.ಎಸ್ ಅವರು ಮಂಡಿಸಿದರು. ವರದಿ ಸಾಲಿನಲ್ಲಿ 16.20 ಕೋಟಿ ಸಾಲ ವಿತರಿಸಿ 15.43 ಕೋಟಿ ಸಾಲ ವಸೂಲಿ ಮಾಡಿ ವರ್ಷಾಖೇರಿಗೆ 16.56 ಕೋಟಿ ಸಾಲ ಇರುತ್ತದೆ. ಶೇ.93.70 ಸಾಲ ವಸೂಲಿ ಆಗಿರುತ್ತದೆ.

ಆಡಿಟ್ ವರ್ಗ “ಬಿ” ತರಗತಿಯಲ್ಲಿ ನಿಗದಿಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಕುಜುಂಬಾರು ದಂಪತಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಸಹಕಾರಿಗಳಾದ ಶ್ರೀಮತಿ ನಾಗವೇಣಿ.ಎಸ್ ನೂಚಿಲ ಸುಬ್ರಹ್ಮಣ್ಯ ಮತ್ತು ಮುಕುಂದ ಗೌಡ ಇಜಿನಡ್ಕ ಐನೆಕಿದು ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ, ಎಸ್.ಎಸ್.ಎಲ್.ಸಿ ಹಾಗೂ ಏಳನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರು, ಸ್ವಂತ ಬಂಡವಾಳದ ಸಾಲವನ್ನು ಸಮಯಕ್ಕೆ ಸರಿಯಾಗಿ ಪಡೆದ ಸದಸ್ಯರನ್ನು, ಅತೀ ಹೆಚ್ಚು ಪಿಗ್ಮಿ ಠೇವಣಿ ನೀಡಿದವರನ್ನು ಬಹುಮಾನ ನೀಡಿ ಗೌರವಿಸಲಾಯಿತು.

ಸಂಘದ ಮಹಾಸಭೆಯ ಹಾಜರಾತಿಯಲ್ಲಿ ದಾಖಲೆಯ ಹಾಜರಾತಿ 991 ಆಗಿದ್ದು, ಶೇ.66.33 ಆಗಿರುವುದಕ್ಕೆ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರು ಹರ್ಷ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಾಧವ.ಡಿ, ನಿರ್ದೇಶಕರುಗಳಾದ ಸೋಮಸುಂದರ.ಕೆ, ರವೀಂದ್ರ ಕುಮಾರ್ ರುದ್ರಪಾದ, ಮೋಹನ್ ದಾಸ್ ರೈ, ವೆಂಕಟೇಶ್.ಹೆಚ್.ಎಲ್, ಸುರೇಶ್ ಕೋಟೆಬೈಲು, ದಾಮೋದರ.ಕೆ, ಕಿರಣ್ ಪೈಲಾಜೆ, ಸುಬ್ರಹ್ಮಣ್ಯ ರಾವ್.ಎ, ಶ್ರೀಮತಿ ಭಾರತಿ ದಿನೇಶ್, ಶ್ರೀಮತಿ ಆಶಾ ಕುಮಾರಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಸ್ವಾಗತಿಸಿ ನಿರ್ದೇಶಕರಾದ ರವೀಂದ್ರ ಕುಮಾರ್ ರುದ್ರಪಾದ ವಂದಿಸಿದರು. ಸೊಸೈಟಿ ಸಿಬ್ಬಂದಿಗಳು ಸಹಕರಿಸಿದರು.

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!