ಕಲ್ಲುಗುಂಡಿಯ ಶ್ರೀ ಅಮ್ಮನ್ ಕ್ರೆಡಿಟ್ ಸೊಸೈಟಿ ಇದರ 12 ನೇ ವಾರ್ಷಿಕ ಮಹಾಸಭೆಯು ಕಛೇರಿ ಮುಂಭಾಗದ ಸಭಾಂಗಣದಲ್ಲಿ ಸೆ.18 ರಂದು ನಡೆಯಿತು.
2021-22ರ ಬ್ಯಾಂಕ್ ನಡೆಸಿದ ಒಟ್ಟು ವ್ಯವಹಾರದ ಲೆಕ್ಕಪತ್ರ ವನ್ನು ಕಾಯ೯ದಶಿ೯ ಶಿವಪೆರುಮಳ್ ಸಭೆಯಲ್ಲಿ ಮಂಡಿಸಿದರು. ಸೊಸೈಟಿ ರೂ.40.00ಲಕ್ಷ ವ್ಯವಹಾರ ನಡೆಸಿ ಲಾಭ ಗಳಿಸಿದ ಅಂಕಿ ಅಂಶ ಗಳನ್ನು ಸಭೆಗೆ ತಿಳಿಸಿದರು.
ಮಹಾಸಭೆಯಲ್ಲಿ ಬ್ಯಾಂಕ್ ನ ನಿರ್ದೇಶಕರಾದ ಅಣ್ಣಾದೊರೆ, ಜಾನಶೀಲ, ಸುಕುಮಾರ್ ಕೆ. ಹಾಗೂ ಸದಸ್ಯರು ಉಪಸ್ಥಿತರಿದ್ದರು.