ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ದ.ಕ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ ಗ್ರಾಮ್ಸ್ ಮಂಗಳೂರು ಇವುಗಳ ಸಹಯೋಗದಲ್ಲಿ ಜಲಜೀವನ್ ಮಿಷನ್ ಯೋಜನೆಯ ಅಡಿಯಲ್ಲಿ ಸುಳ್ಯ ತಾಲೂಕಿನ ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ಸೆ.14 ರಂದು ಮಳೆ ನೀರು ಕೊಯ್ಲು ಘಟಕ ಮತ್ತು ಬೂದು ನೀರು ನಿರ್ವಹಣೆ ಸೌಲಭ್ಯ ಕುರಿತು ಪ್ರೇರೇಪಣಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸವಿತಾ.ಕೆ, ಉಪಾಧ್ಯಕ್ಷರಾದ ತ್ರಿವೇಣಿ.ಕೆ.ವಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಹೂವಪ್ಪ ಗೌಡ, ಪಂಚಾಯತ್ ಸದಸ್ಯರಾದ ರಮೇಶ್.ರೈ, ರವೀಂದ್ರ ರೈ, ಜೆ.ಹರ್ಷ, ಅಶಾ ಕಾರ್ಯಕರ್ತೆಯರು, ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಮಳೆ ನೀರು ಕೊಯ್ಲು ಘಟಕ ಮತ್ತು ಬೂದು ನೀರು ನಿರ್ವಹಣೆ ಸೌಲಭ್ಯದ ಬಗ್ಗೆ ಅನುಷ್ಠಾನ ಬೆಂಬಲ ಸಂಸ್ಥೆ ಗ್ರಾಮ್ಸ್ ಸಿಬ್ಬಂದಿಗಳಾದ ಅಭಿಲಾಷ್.ಕೆ.ಎಲ್, ಘೋಷಿತ್ ಹಾಗೂ ಎನ್.ಆರ್.ಎಲ್.ಎಮ್ ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತಾ.ವಿ.ಜಿ ಯವರು ಮಾಹಿತಿ ನೀಡಿದರು.
ವರದಿ :- ಉಲ್ಲಾಸ್ ಕಜ್ಜೋಡಿ