ಗ್ರಾಹಕನಂತೆ ನಟಿಸಿ ಅಂಗಡಿಯಿಂದ ಮೊಬೈಲ್ ಫೋನನ್ನು ಕಳವುಗೈದ ಘಟನೆ ಜಾಲ್ಸೂರಿನಿಂದ ವರದಿಯಾಗಿದ್ದು, ಈ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿರುವುದಾಗಿ ತಿಳಿದುಬಂದಿದೆ.ಸೆ.15ರಂದು ರಾತ್ರಿ 10 ಗಂಟೆಯ ವೇಳೆಗೆ ಅಪರಿಚಿತ ವ್ಯಕ್ತಿಯೋರ್ವ ಖರೀದಿಯ ನೆಪದಲ್ಲಿ ಜಾಲ್ಲೂರಿನ ಶ್ರೀನಿವಾಸ ಕಾಂಪ್ಲೆಕ್ಸ್ ನಲ್ಲಿರುವ ದೇವಪ್ಪ ಅವರ ಗೂಡಂಗಡಿಗೆ ಬಂದು ಟೇಬಲ್ ಮೇಲೆ ಇಟ್ಟಿದ್ದ ಅವರ ಮೊಬೈಲನ್ನು ಕಳವುಗೈದಿದ್ದು, ಈ ದೃಶ್ಯ ಅಂಗಡಿಯಲ್ಲಿರುವ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
- Sunday
- November 24th, 2024