Ad Widget

ವಲಯ ಮಟ್ಟದ ಪ್ರತಿಭಾ ಕಾರಂಜಿ-ಮರ್ಕಂಜ ಪ್ರೌಢಶಾಲೆ ಸಮಗ್ರದಲ್ಲಿ ದ್ವಿತೀಯ

ಅಜ್ಜಾವರ ಸರಕಾರಿ ಪ್ರೌಢಶಾಲೆಯಲ್ಲಿ ಸೆ.13ರಂದು ನಡೆದ ಅರಂತೋಡು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮರ್ಕಂಜ ಪ್ರೌಢಶಾಲೆ ಸಮಗ್ರ ದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

. . . . . . .

ಮರ್ಕಂಜ ಪ್ರೌಢಶಾಲೆಯ ವಿದ್ಯಾರ್ಥಿ ಗಳಾದ ಶ್ರೀವಾಸ್ತವ್ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ, ಜನನಿ ಐ.ಟಿ. ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ, ಗಾಯನ ಬಿ.ಡಿ. ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ಹವ್ಯಶ್ರೀ ಕನ್ನಡ ಭಾಷಣ ಸ್ಪರ್ಧೆ ಸಾಮಾನ್ಯ ವಿಷಯದಲ್ಲಿ ಪ್ರಥಮ, ತನ್ಮಯ್ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ, ರಚನ್ ಬಿ ಎ ಮತ್ತು ಸಿಂಚನ ಇ. ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ, ದುಷ್ಯಂತ್ ಛದ್ಮವೇಷ ಸ್ಪರ್ಧೆಯಲ್ಲಿ ದ್ವಿತೀಯ, ಜಾನಪದ ನೃತ್ಯ ದಲ್ಲಿ ಪ್ರಮಿತ, ಪ್ರಾಪ್ತಿ, ವಿಸ್ಮಿತ, ಶ್ವೇತ, ಪ್ರಜ್ಞಕುಮಾರಿ, ಯಜ್ಞಶ್ರೀ ದ್ವಿತೀಯ, ವಾದ್ಯ ನುಡಿಸುವವರಾಗಿ ಪುನಿತ್ ಎ ಮತ್ತು ಯತೀಶ್ ದ್ವಿತೀಯ, ಮಿಮಿಕ್ರಿ ಸ್ಪರ್ಧೆಯಲ್ಲಿ ದರ್ಶನ್ ಬಿ. ದ್ವಿತೀಯ, ಕವ್ವಾಲಿ ಸ್ಪರ್ಧೆಯಲ್ಲಿ ಹಿತಾಶ್ರೀ, ತನ್ಮಯ್, ಮಿತೇಶ್, ಮೈನಾ, ಮೇಘಶ್ರೀ, ಪ್ರದೀಪ್, ತೃತೀಯ, ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಶಿಷ್ಮಾ ತೃತೀಯ, ರಂಗೋಲಿ ಸ್ಪರ್ಧೆಯಲ್ಲಿ ಶೃದ್ಧಿ ತೃತೀಯ, ಜನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಯಶಸ್ವಿ ಕೆ. ತೃತೀಯ ಸ್ಥಾನಗಳಿಸಿ ಮರ್ಕಂಜ ಪ್ರೌಢಶಾಲೆ ಅರಂತೋಡು ವಲಯ ಮಟ್ಟದಲ್ಲಿ ಸಮಗ್ರ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಮುಖ್ಯೋಪಾಧ್ಯಾಯರಾದ ಶ್ರೀಮತಿ ವೀಣಾ ಎಂ.ಟಿ. ಇವರ ಮಾರ್ಗದರ್ಶನದಲ್ಲಿ ಶಿಕ್ಷಕರಾದ ಕೆಂಚವೀರಪ್ಪ, ಅಚ್ಚುತ ಪಿ, ಪ್ರವೀಣಕುಮಾರಿ ಇ, ರುಕ್ಕಿಣಿ ಕೆ, ಮಲ್ಲಿಕಾ ಟಿ, ಸುಜಯಕುಮಾರಿ ಬಿ ಡಿ, ವಿಜಯಲಕ್ಷ್ಮಿ ಎಂ ಹಾಗೂ ಗೀತ ಕುಮಾರಿ ಇವರುಗಳು ವಿದ್ಯಾರ್ಥಿಗಳಿಗೆ ಸಲಹೆ ಮಾರ್ಗದರ್ಶನ ನೀಡಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!