ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ 2021- 22 ನೇ ಸಾಲಿನ 103 ನೇ ಮಹಾಸಭೆಯು ಸಿರಿಸೌಧ ಸಭಾಂಗಣದಲ್ಲಿ ನಡೆಯಿತು.ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ವಹಿಸಿದ್ದರು. ಭಾರತ ಮಾತೆಯ ಭಾವಚಿತ್ರದ ಬಳಿ ಸಂಘದ ಹಿರಿಯ ನಿರ್ದೇಶಕರಾದ ಚಂದ್ರಶೇಖರ ಚೋಡಿಪಣೆಯವರು ದೀಪ ಪ್ರಜ್ವಲನೆಯನ್ನು ಮಾಡಿದರು.
ಸಂಘದ ಎಲ್ಲಾ ನಿರ್ದೇಶಕರು ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ನಡೆಸುವುದರೊಂದಿಗೆ ಮಹಾಸಭೆಯನ್ನು ಆರಂಭಿಸಲಾಯಿತು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ವಾಸುದೇವ ನಾಯಕ್‌ರವರು 2021-22 ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿ, ಆರ್ಥಿಕ ವರ್ಷಾಂತ್ಯಕ್ಕೆ 2303 ಸದಸ್ಯರಿದ್ದು ರೂ. 23.96 ಕೋಟಿ ಠೇವಣಿ ಹೊಂದಿದ್ದು, ರೂ 26.79 ಕೋಟಿ ಸಾಲ ಹೊರ ಬಾಕಿಯಿರುತ್ತದೆ. 198 ಕೋಟಿ ವ್ಯವಹಾರ ಮಾಡಿ, 47 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ರೂ. 28.15 ಲಕ್ಷ ಲಾಭದೊಂದಿಗೆ ಮುನ್ನಡೆದಿದೆ ಎಂದರು.
ನಂತರ ಅನುಪಾಲನಾ ವರದಿ ಬಜೆಟ್ ಗಿಂತ ಹೆಚ್ಚಿಗೆ ಖರ್ಚಾಗಿರುವುದನ್ನು, 2022-23ನೇ ಸಾಲಿನ ಆಯ ವ್ಯಯ ಪಟ್ಟಿಯನ್ನು, 2022-23ನೇ ಸಾಲಿನ ಕಾರ್ಯಚಟುವಟಿಕೆ, ಉಪವಿಧಿಗಳ ತಿದ್ದುಪಡಿಗಳನ್ನು ಮಂಡಿಸಿ ಅನುಮೋದನೆ ಪಡಕೊಳ್ಳಲಾಯಿತು.ಸಭೆಯಲ್ಲಿ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ನಿರ್ದೇಶಕರಾದ ವಿನೋದಕುಮಾರ್ ಉಳುವಾರು, ಚಂದ್ರಶೇಖರ ಚೋಡಿಪಣೆ, ಕುಸುಮಾಧರ ಅಡ್ಕಬಳೆ, ನಿಧೀಶ್ ಅರಂತೋಡು, ಸಂತೋಷ್ ಚಿಟ್ಟನ್ನೂರು, ಭಾರತಿ ಪಿಂಡಿಮನೆ, ಚಿತ್ರಾ ದೇರಾಜೆ, ಸೋಮಯ್ಯ ಹೆಚ್.,ಗಣೇಶ್ ಕರಿಂಬಿ, ವಿಜೇತ್ ಮರುವಳ ಮತ್ತು ಕೇಶವ ಅಡ್ತಲೆ ಉಪಸ್ಥಿತರಿದ್ದರು.
ಸಂಘದ ಸದಸ್ಯ ದಿನೇಶ್ ದೇರಾಜೆಯವರು ಪ್ರಾರ್ಥಿಸಿ, ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಸ್ವಾಗತಿಸಿದರು. ಸಂಘದ ನಿರ್ದೇಶಕರಾದ ಕುಸುಮಾಧರ ಅಡ್ಕಬಳೆಯವರು ವಂದಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ನಿರೂಪಿಸಿದರು.