ಮಳೆ ಹಾನಿ ಪ್ರದೇಶದ ಹರಿಹರ – ಕೊಲ್ಲಮೊಗ್ರ ಗ್ರಾಮಗಳಿಗೆ ಕರ್ನಾಟಕ ರಾಜ್ಯ ರೈತ ಸಂಘದ ದ.ಕ ಜಿಲ್ಲಾ ಘಟಕ, ಸುಳ್ಯ ತಾಲೂಕು ಘಟಕ ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳು ಸೆ. 11ರಂದು ಭೇಟಿ ನೀಡಿ ಸಂತ್ರಸ್ತರ ಅಹವಾಲು ಸ್ವೀಕರಿಸಿದರು.
ಮಳೆಯಿಂದ ಹಾನಿಗೊಳಗಾದ ಹರಿಹರ ಪೇಟೆಯ ಬಾಳುಗೋಡು ಸೇತುವೆಯ ಬದಿಗಳು ಹಾಗೂ ಅಂಗಡಿ ಮುಂಗಟ್ಟುಗಳ ಹಾನಿಯನ್ನು ವೀಕ್ಷಿಸಿ ನಂತರ ಕೊಲ್ಲಮೊಗ್ರ ಭಾಗದಲ್ಲಿ ಮನೆ ಕುಸಿತ, ಕೋನಡ್ಕ ಭಾಗಕ್ಕೆ ಸೇತುವೆ ಸಂಪೂರ್ಣ ಕಡಿತದ ಬಗ್ಗೆ ಹಾಗೂ ಬೆಂಡೋಡಿ ರಸ್ತೆಯ ಶಿರೂರಿನಲ್ಲಿ ಭಾರಿ ಹಾನಿಯಾದ ಪ್ರದೇಶಗಳನ್ನು ವೀಕ್ಷಿಸಿದರು.
ನಂತರ ಮಾತನಾಡಿದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಸಂತ್ರಸ್ತರ ವರದಿ ಪಡೆದು ಜಿಲ್ಲಾಡಳಿತ ಹಾಗೂ ಸರಕಾರ ಕೂಡಲೇ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಅಂದರು.ಈ ನಿಯೋಗದಲ್ಲಿ ಜಿಲ್ಲಾ ನಾಯಕರಾದ ಸುರೇಂದ್ರ ಕೋರಿಯ ಶಾಹುಲ್ ಹಮೀದ್, ಆದಿತ್ಯ ಕೊಲ್ಲಾಜೆ, ದಿವಾಕರ ಪೈ, ಬಾಲಕೃಷ್ಣ ಪರಮಲೆ ಹಾಗೂ ಸುಳ್ಯ ತಾಲೂಕು ನಾಯಕರಾದ ಲೋಲಾಜಾಕ್ಷ ಭೂತಕಲ್ಲು ಭರತ್ ಕುಮಾರ್, ಚೆನ್ನಕೇಶವ, ಗ್ರಾಮ ಘಟಕದ ಪದಾಧಿಕಾರಿಗಳಾದ ಮಾಧವ ಗೌಡ ದೊಡ್ಡಹಿತ್ತು, ವಸಂತ ಪೆಳ್ತಡ್ಕ ಚಂದ್ರಶೇಖರ್ ಬಂಡೋಡಿ, ಮಂಜುನಾಥ್ ಮಡ್ತಿಲ ಉಪಸ್ಥಿತರಿದ್ದರು.