ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ ಸೆ.14ರಂದು ರಾಷ್ಟ್ರೀಯ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ.ಯಶೋದಾ ರಾಮಚಂದ್ರ ರವರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿಂದಿ ಉಪನ್ಯಾಸಕಿ ಶ್ರೀಮತಿ ಅನಸೂಯ ಕೆ ಆರ್ ರವರು ಹಿಂದಿ ದಿವಸ ಆಚರಣೆಯ ಹಿನ್ನೆಲೆ ಹಾಗೂ ಮಹತ್ವದ ಬಗ್ಗೆ ವಿವರಿಸಿದರು. ವಿದ್ಯಾರ್ಥಿನಿ ಫಾತಿಮತ್ ರುಶ್ದಾರವರು ಹಿಂದಿ ಭಾಷೆಯು ಯಾವ ರೀತಿ ರಾಷ್ಟ್ರೀಯ ಭಾಷೆಯಾಗಿ ಮಾನ್ಯತೆ ಪಡೆದಿದೆ ಹಾಗೂ ಜನಪ್ರಿಯವಾಗಿದೆ ಎಂಬುದನ್ನು ವಿವರಿಸಿದರು. ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ರವರು ಕಾರ್ಯಕ್ರಮಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ವಿದ್ಯಾರ್ಥಿನಿಯರ ಹಿಂದಿ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್ ಹಾಗೂ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
- Saturday
- November 23rd, 2024