ಮಹಶಿರ್ ಮತ್ಸ್ಯ ರೈತ ಉತ್ಪಾದಕರ ಮಂಡಳಿ ಸುಳ್ಯ( FPO)ಇದರ ವತಿಯಿಂದ ಮೀನು ಸಾಕಾಣಿಕೆ ರೈತರಿಗೆ 60,000 ಮೀನುಮರಿ ಗಳನ್ನು ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ ಜಾಗೂ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿಯವರು ಮೀನು ಸಾಕಣೆಯ ಅರ್ಹ ರೈತರಿಗೆ ಮೀನು ಮರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಹಶಿರ್ ಮತ್ಸ್ಯ ರೈತ ಉತ್ಪಾದಕರ ಕಂಪನಿ ಇದರ ನಿರ್ದೇಶಕರುಗಳಾದ ಸುಪ್ರೀತ್ ಮೋಂಟಡ್ಕ, ಅಶೋಕ ಅಡ್ಕಾರ್, ನವೀನ್ ಚಾತುಬಾಯಿ, ಪ್ರಶಾಂತ್ ಅಂಬೇಕಲ್ಲು, ಸುಧಾಕರ ಎ. ಜಿ., ಶಶಿಕಲಾ ನಿರಬೀದಿರೆ, ವಿಜೇತ್ ಅಡ್ಯಡ್ಕ, ಸಿಇಒ ಧನುಷ್ ಪೆರುಂಬಾರು, ಮೀನು ಸಾಕಾಣಿಕೆ ರೈತರುಗಳಾದ ವರ್ಷಿತ್ ತಳೂರು, ಸೋಜಾ ಜೋನ್, ದಿವಾಕರ ಹುಲಿಮನೆ, ರಾಘವ ಪೆರಾಜೆ, ತುಷಾರ್ ಪೆರಾಜೆ, ಬಾಲ ಬೈತಡ್ಕ, ಗೋಪಿನಾಥ್, ದಿನೇಶ್, ಮಿಲನ್ , ನಿಶಾಂತ್, ಪ್ರವೀಣ, ಗಿರೀಶ್ ಪೆರುಮುಂಡ, ಮೊದಲಾದವರು ಉಪಸ್ಥಿತರಿದ್ದರು.