ಕನ್ನಡ, ಸಾಹಿತ್ಯ, ಸಂವರ್ಧನೆಗೆ ನಿರಂತರ ಪ್ರಯತ್ನಿಸುತ್ತಾ ಬಂದಿರುವ ಕಾಸರಗೋಡಿನ ಸೀತಮ್ಮ ನಾಯಕ ಪುರುಷ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ 2022 ನೇ ಸಾಲಿನ ಪ್ರತಿಷ್ಠಿತ ಕನ್ನಡ ಪಯಸ್ವಿನಿ ಪ್ರಶಸ್ತಿ- 2022 ರಂದು ಸೆ.11 ರಂದು ಪ್ರಾಧ್ಯಾಪಕಿ, ಸಾಹಿತಿ, ಸಂಘಟಕಿ, ಸಂಪನ್ಮೂಲ ವ್ಯಕ್ತಿ ಸುಳ್ಯದ ಡಾ. ಅನುರಾಧಾ ಕುರುಂಜಿ ಅವರಿಗೆ ಕಾಸರಗೋಡಿನಲ್ಲಿ ಪ್ರದಾನ ಆಯ್ಕೆ ಮಾಡಲಾಯಿತು.
ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ವಾಮನ್ ರಾವ್ ಬೇಕಲ್ ಮತ್ತು ಕೋಶಾಧ್ಯಕ್ಷೆ ಸಂಧ್ಯಾರಾಣಿ ಟೀಚರ್ ಶಾಲು ಹೊದಿಸಿ ಹಾರ ಹಾಕಿ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕ ಡಾ. ಎಂ.ಜಿ.ಆರ್ ಅರಸ್, ಕಾಸರಗೋಡು ಜಿಲ್ಲಾ 6ನೇ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ವೆಂಕಟ್ ಭಟ್ ಎಡನೀರು, ಚುಟುಕು ಪರಿಷತ್ತಿನ ಮೈಸೂರು ಜಿಲ್ಲಾ ಉಪಾಧ್ಯಕ್ಷ ನಟರಾಜ್ ಮೈಸೂರು, ಕಾಸರಗೋಡಿನ ನಿವೃತ್ತ ಪ್ರಾಂಶುಪಾಲ ಪ್ರೊ. ಶ್ರೀನಾಥ್, ನಿವೃತ್ತ ಅಧ್ಯಾಪಕ ವಿಶಾಲಾಕ್ಷ ಪುತ್ರರು, ನಿರಂಜನ ಕೆ, ಜಯಾನಂದ ಕುಮಾರ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ರಾಧಾಕೃಷ್ಣ ಕೆ ಉಳಿಯತ್ತಡ್ಕ ಅಭಿನಂದನಾ ಭಾಷಣ ಮಾಡಿದರು. ರೇಖಾ ಸುರೇಶ್ ರಾವ್ ಪ್ರಶಸ್ತಿ ಪತ್ರ ವಾಚಿಸಿದರು. ಪ್ರದೀಪ್ ಬೇಕಲ್ ಸ್ವಾಗತಿಸಿ, ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಕೂಡ್ಲು ವಂದಿಸಿದರು.