Ad Widget

ಕಲ್ಲುಗುಂಡಿ : ಅಟೋ ರಿಕ್ಷಾ ಚಾಲಕರ ಸಂಘದ ಪದಗ್ರಹಣ

ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ಬಿ.ಯಂ.ಯಸ್ ಸಂಯೋಜಿತ) ಕಲ್ಲುಗುಂಡಿ ಘಟಕ ಇದರ ವಾರ್ಷಿಕ ಮಹಾಸಭೆಯು ಇಂದು ಸಂಪಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸುಳ್ಯ ತಾಲೂಕು ಬಿ.ಯಂ.ಯಸ್ ಅಧ್ಯಕ್ಷರಾದ ರಾಧಾಕೃಷ್ಣ ಬೈತಡ್ಕ ಹಾಗೂ ಕಾರ್ಯದರ್ಶಿಯಾದ ಚಂದ್ರಶೇಖರ ಮರ್ಕಂಜ ಹಾಗೂ ಕಲ್ಲುಗುಂಡಿ ಬಿ.ಯಂ.ಯಸ್ ಘಟಕದ ಅಧ್ಯಕ್ಷರಾದ ವಸಂತ ಊರುಬೈಲ್ ಇವರ ನೇತೃತ್ವದಲ್ಲಿ ಕಲ್ಲುಗುಂಡಿ ಘಟಕದ ಸಭೆ ನಡೆಯಿತು.
ಈ ಸಭೆಯಲ್ಲಿ ಕೋಶಾಧಿಕಾರಿಯಾದ ಪ್ರಮೋದ್ ಅವರು ಖರ್ಚುವೆಚ್ಚಗಳ ಲೆಕ್ಕಾಚಾರವನ್ನು ಮಂಡಿಸಿದ್ದರು. ಕಾರ್ಯದರ್ಶಿ ಯಶೋದರರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸುಳ್ಯ ಬಿ.ಯಂ.ಯಸ್. ತಾಲೂಕು ಅಧ್ಯಕ್ಷರ ಉಪಸ್ಥಿತಿ ಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಕೇಶವ ಬಂಗ್ಲೆಗುಡ್ಡೆ, ಉಪಾಧ್ಯಕ್ಷರಾಗಿ ಜಗದೀಶ್ ದೊಡ್ಡಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ರವಿ ನಿಡಿಂಜಿ, ಕೋಶಾಧಿಕಾರಿಯಾಗಿ ಕೃಷ್ಣಪ್ರಸಾದ್ ಕಾಪಿಲ, ಸಂಘಟನಾ ಕಾರ್ಯದರ್ಶಿಗಳಾಗಿ ರತ್ನಾಕರ ಕೈಪಡ್ಕ ಹಾಗೂ ಪ್ರಭಾಕರ ಕಾಡುಪಂಜ, ನಿರ್ದೇಶಕರಾಗಿ ರಮೇಶ್ ಎಸ್ ನೆಲ್ಲಿಕುಮೇರಿ ಹಾಗೂ ನವೀನ್ ಆಚಾರ್ಯ ಅಧಿಕಾರ ಸ್ವೀಕರಿಸಿದರು. ಸಭೆಯಲ್ಲಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪ್ರಕೃತಿ ವಿಕೋಪದಿಂದ ಮನೆಕಳೆದುಕೊಂಡ ಸದಸ್ಯರಾದ ಸುಧಾಕರ ಬಾಚಿಗದ್ದೆ ಹಾಗೂ ಚಿದಾನಂದ ಮೂಡನಕಜೆ ಇವರಿಗೆ ಧನಸಹಾಯವನ್ನು ವಿತರಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading