ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಿಶ್ವನಾಥ ಮತ್ತು ಹೇಮಾವತಿ ದಂಪತಿಗಳ ಪುತ್ರಿ ಸಮೀಕ್ಷಾರವರು ಎಲುಬು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಈಗಾಗಲೇ ಮನೆಯವರು ಅವರ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಿದ್ದು, ಸಮೀಕ್ಷಾರವರು ಸಂಪೂರ್ಣ ಗುಣಮುಖರಾಗಲು ಇನ್ನೂ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು, ಹಲವಾರು ಸಂಘ ಸಂಸ್ಥೆಗಳು ಹಾಗೂ ಜನರು ಇವರಿಗೆ ಸಹಾಯಹಸ್ತ ಚಾಚುತ್ತಿದ್ದು, ಅದೇ ರೀತಿ ನೆರಳು ಗೆಳೆಯರ ಬಳಗ ಎಂಬ ಯುವಕರ ತಂಡ ಹಾಗೂ ಸೇವಾ ಭಾರತಿ ತಂಡದ ಸದಸ್ಯರು ಸಮೀಕ್ಷಾರವರ ಚಿಕಿತ್ಸೆಗೆ ಒಂದು ಚಿಕ್ಕ ನೆರವನ್ನು ನೀಡುವ ಉದ್ದೇಶದಿಂದ ಸೌತ್ತಡ್ಕ, ಧರ್ಮಸ್ಥಳ ಹಾಗೂ ಸುಬ್ರಹ್ಮಣ್ಯ ಭಾಗದಲ್ಲಿ ವೇಷ ಧರಿಸಿ ಹಣ ಸಂಗ್ರಹ ಮಾಡಿ, ಸಂಗ್ರಹವಾದ 60,100 ರೂಪಾಯಿ ಸಹಾಯಧನವನ್ನು ಸೆ.05 ರಂದು ಸಮೀಕ್ಷಾರವರ ಮನೆಗೆ ತೆರಳಿ ವಿತರಣೆ ಮಾಡಿದರು. ಸಹಾಯಧನ ಹಸ್ತಾಂತರಿಸುವ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪ್ರಸನ್ನ ದರ್ಬೆ, ಸೇವಾಭಾರತಿ ತಂಡದ ಸದಸ್ಯರು, ನೆರಳು ಗೆಳೆಯರ ಬಳಗದ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ