ಕಲ್ಲುಗುಂಡಿಯ ಮುಖ್ಯಪೇಟೆಯ ಬೊಳುಗಲ್ಲು ಕಾಂಪ್ಲೆಕ್ಸ್ ಬಳಿ ಹಾಗೂ ಪೆಟ್ರೋಲ್ ಪಂಪ್ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಎರಡು ಜಾನುವಾರುಗಳು ಸಾವನ್ನಪ್ಪಿದ ಘಟನೆ ಕಳೆದ ರಾತ್ರಿ ನಡೆದಿದೆ. ಕಲ್ಲುಗುಂಡಿ ಸೇರಿದಂತೆ ತಾಲೂಕಿನ ವಿವಿಧೆಡೆ ಜಾನುವಾರು ಸಾಕುವವರು ರಸ್ತೆ ಬಿಡುವುದು ಮಾಮೂಲಿಯಾಗಿದೆ. ಇದಕ್ಕೆ ಸ್ಥಳೀಯ ಪಂಚಾಯತ್ ಅದೆಷ್ಟೂ ಸೂಚನೆ ನೀಡಿದರೂ ಸಾಕುವವರ ನಿರ್ಲಕ್ಷ್ಯಕ್ಕೆ ನೂರಾರು ಜಾನುವಾರುಗಳು ಬಲಿಯಾಗುತ್ತಿದೆ. ಜತೆಗೆ ದ್ವಿಚಕ್ರ ವಾಹನ ಸವಾರರು ಕೂಡ ಬಿದ್ದು ಗಾಯಗೊಂಡ ಪ್ರಕರಣಗಳು ನಡೆದಿದೆ. ಈ ಬಗ್ಗೆ ಆಡಳಿತ ಸೂಕ್ತ ಕ್ರಮ ಕೈಗೊಂಡು ರಾತ್ರಿ ರಸ್ತೆಯಲ್ಲಿ ಮಲಗುವ ಜಾನುವಾರುಗಳು ಅಪಘಾತದಿಂದ ಸಾಯುವುದು ಮತ್ತು ಕಳ್ಳರ ಪಾಲಾಗುವುದನ್ನು ತಪ್ಪಿಸಲು ಪ್ರಯತ್ನಿಸಬೇಕಿದೆ. ಈ ಬಗ್ಗೆ ಪಂಚಾಯತ್ ಗಳು ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಹಿಂದೂ ಸಂಘಟನೆಗಳು ಕೂಡ ಈ ಬಗ್ಗೆ ಆಸಕ್ತಿ ವಹಿಸಿ ಬಿಡಾಡಿ ದನಗಳನ್ನು ಗೋಶಾಲೆಗೆ ಹಾಕಿ ಅವುಗಳ ಜೀವ ಹಾಗೂ ವಾಹನ ಸವಾರರು ಪ್ರಾಣ ಉಳಿಸಬೇಕಿದೆ.
- Saturday
- November 23rd, 2024